ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹ 1 ಕೋಟಿ ವಿಮೆ

Prasthutha|

ಬೆಂಗಳೂರು: ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ₹ 1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿ ಮಾಡಲಾಗಿದೆ.

- Advertisement -

ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಡಂಬಡಿಕೆಯಿಂದ ಇದ್ದ ₹50 ಲಕ್ಷ ವಿಮೆಗೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಒಡಂಬಡಿಕೆಯಿಂದ ಮಾಡಿದ ₹50 ಲಕ್ಷ  ಅಪಘಾತ ವಿಮೆ ಸೇರಿಸಲಾಗಿ ಒಟ್ಟು 1ಕೋಟಿ ವಿಮೆಯನ್ನು ಜಾರಿ ಮಾಡಲಾಗಿದೆ.

ದೇಶದಲ್ಲೇ ಇಷ್ಟು ದೊಡ್ಡ ಮೊತ್ತದ ವಿಮೆ ಮಾಡಿಸಿರುವ ಸಾರಿಗೆ ಇಲಾಖೆ ಕೆಎಸ್‌ಆರ್‌ಟಿಸಿ ಎಂದೂ ಸಂಸ್ಥೆ ಹೇಳಿಕೊಂಡಿದೆ.

- Advertisement -

ಕರ್ತವ್ಯನಿರತರಾಗಿದ್ದಾಗ ಆಗಲೀ, ಕರ್ತವ್ಯದಲ್ಲಿ ಇಲ್ಲದಿರುವಾಗ ಆಗಲೀ ನಿಗಮದ ಸಿಬ್ಬಂದಿ ಮೃತಪಟ್ಟರೆ ಅಥವಾ ಶಾಶ್ವತ ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ₹50 ಲಕ್ಷ ಪರಿಹಾರ ನೀಡುವ ಪ್ರೀಮಿಯಂರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಜಾರಿಗೆ ತಂದಿತ್ತು.

ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿ. ಜತೆಗೆ ಒಡಂಬಡಿಕೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ, ಸಿಬ್ಬಂದಿ ಪ್ರತಿ ತಿಂಗಳು ₹62.50 ಹಾಗೂ ಜಿ.ಎಸ್.ಟಿ ಸೇರಿ ವಾರ್ಷಿಕ ₹885 ಪ್ರೀಮಿಯಂ) ಪಾವತಿಸಬೇಕಾಗುತ್ತದೆ.

Join Whatsapp