ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ| ವಿಟ್ಲದ ಯುವಕ ಸ್ಥಳದಲ್ಲೇ ಮೃತ್ಯು

Prasthutha|

ವಿಟ್ಲ: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ವಿಟ್ಲದ ಯುವಕ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

- Advertisement -

ಮೃತಪಟ್ಟ ಯುವಕನನ್ನು ವಿಟ್ಲದ ಉಕ್ಕುಡ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಎಂಬವರ ಹಿರಿಯ ಪುತ್ರ ಹಬೀಬ್ ಉಕ್ಕುಡ ಎಂದು ಗುರುತಿಸಲಾಗಿದೆ.

ಹಬೀಬ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಪಲ್ಟಿಯಾಗಿದ್ದು, ಹಬೀಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

- Advertisement -

ಹಬೀಬ್ ಉದ್ಯೋಗ ನಿಮಿತ್ತ ಮೂರು ತಿಂಗಳ ಹಿಂದೆಯಷ್ಟೇ ಸೌದಿ ಅರೇಬಿಯಾಗೆ ತೆರಳಿದ್ದರು.

Join Whatsapp