ಕಲಬುರಗಿ: ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಐವರು ಬಲಿ

Prasthutha|

ಕಲಬುರಗಿ: ಭೀಕರ ಅಪಘಾತಕ್ಕೆ ಸ್ಥಳದಲ್ಲಿಯೇ ಐವರು ಮೃತಪಟ್ಟಿರುವ ಘಟನೆ ಇಲ್ಲಿನ ಅಫಜಲಪುರದ ಹೊರವಲಯದಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿ ನಾಲ್ವರು ಮಹಿಳೆಯರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

- Advertisement -

ಮೃತರೆಲ್ಲರೂ ಮಹಾರಾಷ್ಟ್ರದ ಅಹ್ಮದನಗರದ ನಿವಾಸಿಗಳಾಗಿದ್ದು, ಗಾಣಗಾಪುರ ದತ್ತಾತ್ರೇಯ ದೇಗುಲದಿಂದ ವಾಪಸಾಗುತ್ತಿದ್ದರು ಎನ್ನಲಾಗಿದೆ. ಅಫಜಲಪುರದಿಂದ ಮಹಾರಾಷ್ಟ್ರ ಕಡೆಗೆ ಹೊರಟಿದ್ದ ಕಾರು ಮರಕ್ಕೆಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ಬಲಿಯಾಗಿದ್ದಾರೆ. ಕಾರು ಚಾಲಕ ನಿದ್ರೆ ಮಂಪರಿನಲ್ಲಿದ್ದರಿಂದ ಅಪಘಾತವಾಗಿರುವ ಶಂಕೆ ವ್ಯಕ್ತವಾಗಿದ್ದು ಅಫಜಲಪುರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



Join Whatsapp