ಚಾರ್ಮಾಡಿಯಲ್ಲಿ ರಸ್ತೆ ಅಪಘಾತ: ಯುವಕ ಮೃತ್ಯು

Prasthutha|

- Advertisement -

ಬೆಳ್ತಂಗಡಿ: ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ. ಮೃತರನ್ನು ತಾಲೂಕಿನ ಚಾರ್ಮಾಡಿ‌ ನಿವಾಸಿ ಇಸ್ಮಾಯಿಲ್ ರವರ ಮಗ ನಝೀರ್ (23) ಎಂದು ಗುರುತಿಸಲಾಗಿದೆ.

ಚಾರ್ಮಾಡಿಯಿಂದ ಕಕ್ಕಿಂಜಿ ಬಳಿ ಬರುತ್ತಿದ್ದ ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಮೃತ ಯುವಕ ರಸ್ತೆಗೆ ಎಸೆಯಲ್ಪಟ್ಚಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು‌ ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -



Join Whatsapp