ಬೆಂಗಳೂರು | ಅಪಘಾತದ ರಭಸಕ್ಕೆ ಓಪನ್ ಆದ ಏರ್ ಬ್ಯಾಗ್ : ಚಾಲಕ ಪಾರು

Prasthutha|

ಬೆಂಗಳೂರು: ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವ ಘಟನೆ ಯಶವಂತಪುರ ಫ್ಲೈಓವರ್ ಬಳಿ ನಡೆದಿದೆ. ಮಲ್ಲೇಶ್ವರಂನಿಂದ ಮೆಟ್ರೋ ಕ್ಯಾಷ್ ಆ್ಯಂಡ್ ಕ್ಯಾರಿ ಕಡೆ ವೇಗವಾಗಿ ಬರುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಗುದ್ದಿ, ರಸ್ತೆ ಪಕ್ಕದ ಚಿಕ್ಕ ಮರದ ಬಳಿ ಬಂದು ನಿಂತಿದೆ.

- Advertisement -


ಮರಕ್ಕೆ ಸಿಲುಕಿದ್ದರಿಂದ ರೈಲ್ವೆ ಹಳಿಗೆ ಬೀಳುವುದು ಸ್ವಲ್ಪದರಲ್ಲೇ ಪಾರಾಗಿ ದೊಡ್ಡ ಅನಾಹುತ ತಪ್ಪಿದೆ. ಅತಿ ವೇಗದ ಕಾರು ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಾಲು, ಕೈಗೆ ಗಾಯಾಗಳಾಗಿದ್ದು, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಯಶವಂತಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

Join Whatsapp