ಬೈಕ್ ಅಪಘಾತ: ASI ಶಬೀರ್ ಹುಸೇನ್ ಮೃತ್ಯು

Prasthutha|

- Advertisement -

ದಾವಣಗೆರೆ: ಬೈಕ್ ಗಳ ಮುಖಾಮುಖಿ ಅಪಘಾತದಲ್ಲಿ‌ ASI ಯೊಬ್ಬರು ಸಾವನ್ನಪ್ಪಿರುವ ಘಟನೆ‌ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಹೊರವಲಯದ ಚಿನ್ನು ಡಾಬಾ ಬಳಿ ಘಟನೆ ನಡೆದಿದ್ದು, ವಿಜಯನಗರ ಜಿಲ್ಲೆಯ ಹಂಪಿ ನಿವಾಸಿಯಾಗಿರುವ ಶಬೀರ್ ಹುಸೇನ್ (59) ಅಪಘಾತದಲ್ಲಿ ಮೃತಪಟ್ಟ ಎಎಸ್‌ಐ ಆಗಿದ್ದಾರೆ.

- Advertisement -

ಇವರು ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ಕೊಟ್ಟೂರು ತರಳುಬಾಳು ಹುಣ್ಣಿಮೆ ಮೆರವಣಿಗೆ ವೇಳೆ ಕಾಳಾಪುರದಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವಿಚಾರವಾಗಿ ಮಾಹಿತಿ ಕಲೆ ಹಾಕಲು ಆಗಮಿಸಿದ್ದ ಶಬೀರ್ ಹುಸೇನ್ ವಿಚಾರಣೆ ಮುಗಿಸಿ ಬಳಿಕ ಮನೆಗೆ ಹೊರಟಿದ್ದರು. ದಾರಿ ಮಧ್ಯೆ ಅಪಘಾತವಾಗಿ ಮೃತಪಟ್ಟಿದ್ದಾರೆ.

Join Whatsapp