ಚಾರ್ಮಾಡಿ: ಕಂದಕಕ್ಕೆ ಉರುಳಿದ ನವ ವಧುವರರಿದ್ದ ಟೆಂಪೊ ಟ್ರಾವೆಲರ್

Prasthutha|

ಚಾರ್ಮಾಡಿ: ಧರ್ಮಸ್ಥಳದಲ್ಲಿ ವಿವಾಹವಾಗಿ ಊರಿಗೆ ಮರಳುತ್ತಿದ್ದ ವೇಳೆ ನವ ವಧು-ವರರಿದ್ದ ಟೆಂಪೊ ಟ್ರಾವೆಲರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಡಿ ಘಾಟ್ ನ ನಾಲ್ಕನೇ ತಿರುವಿನಲ್ಲಿ ನಡೆದಿದೆ.

- Advertisement -

ಅದೃಷ್ಟವಶಾತ್ ಟೆಂಪೊ ಟ್ರಾವೆಲರ್’ನಲ್ಲಿದ್ದ ವಧು-ವರ ಹಾಗೂ ಕುಟುಂಬಸ್ಥರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಧರ್ಮಸ್ಥಳದಲ್ಲಿ ವಿವಾಹ ಕಾರ್ಯ ಮುಗಿಸಿ ವಧು ವರರು ತಮ್ಮ ಕುಟುಂಬಸ್ಥರೊಂದಿಗೆ ತಮ್ಮ ಊರಾದ ಚಿಕ್ಕಮಗಳೂರಿಗೆ ವಾಪಸಾಗುತ್ತಿದ್ದರು‌‌. ಈ ವೇಳೆ  ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ.

Join Whatsapp