‘ಅಚ್ಛೆ ದಿನ್’: ನಂದಿನಿ ಹಾಲು ಲೀಟರ್ ಗೆ 3ರೂ. ಹೆಚ್ಚಳ

Prasthutha|

ಬೆಂಗಳೂರು: ಪ್ರತಿ ಲೀಟರ್ ನಂದಿನಿ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

- Advertisement -

ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಲು ರಾಜ್ಯ ಹಾಲು ಮಹಾಮಂಡಳ (ಕೆಎಂಎಫ್‌) ನಿರ್ಧರಿಸಿದೆ. ಕೆಎಂಎಫ್‌ನ ವಾರ್ಷಿಕ ಸಭೆಯಲ್ಲಿ ಹಾಲಿನ ಮಾರಾಟ ದರ ಹೆಚ್ಚಿಸುವ ಸಂಬಂಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ದರ ಏರಿಕೆಗೆ ಒಲವು ವ್ಯಕ್ತಪಡಿಸಿದ್ದರು. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರ ಬೆಲೆ ಏರಿಕೆಗೆ ಅನುಮೋದನೆ ನೀಡಿದೆ.

69ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಕಾರ್ಯಕ್ರಮದಲ್ಲಿ ಬೆಲೆ ಏರಿಕೆಯನ್ನು ಪ್ರಕಟಿಸಲಾಯಿತು.

- Advertisement -

ನಂದಿನಿ ಹಾಲಿನ ದರ 3 ರೂ,ಏರಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಹೊಸದರ ಜಾರಿಯಾಗಲಿದ್ದು, ನಾಳೆ ಬೆಳಗ್ಗೆಯಿಂದ ಲೀಟರ್​​​ ಹಾಲಿನ ಮೇಲೆ 3 ರೂ. ಏರಿಕೆಯಾಗಲಿದೆ. ನಂದಿನಿ ಹಾಲು, ಮೊಸರು ತಲಾ 3 ರೂಪಾಯಿ ಹೆಚ್ಚಳವಾಗಿದ್ದು, KMF ಹಾಲಿನ ದರ ಪರಿಷ್ಕರಣೆ ಮಾಡಿದೆ.

ಟೋನ್ಡ್ ಹಾಲಿಗೆ 40 ರೂ., ಹೋಮೋಜಿನೈಸ್ಡ್ ಟೋನ್ಡ್ ಹಾಲು 41 ರೂ, ಹೋಮೋಜಿನೈಸ್ಡ್ ಹಸುವಿನ ಹಾಲು 45 ರೂ., ಸ್ಪೆಷನ್ ಹಾಲು 46 ರೂ., ಶುಭಂ ಹಾಲು 46 ರೂ., ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 47 ರೂ., ಸಮೃದ್ಧಿ ಹಾಲು 51 ರೂ., ಸಂತೃಪ್ತಿ ಹಾಲು 53 ರೂ, ಡಬಲ್ ಡೋನ್ಡ್ ಹಾಲು  39 ರೂ. ನಿಗದಿಪಡಿಸಲಾಗಿದೆ. ಅದೇ ರೀತಿ ಪ್ರತಿ ಲೀಟರ್ ಮೊಸರಿನ ಬೆಲೆ  45ರಿಂದ 48 ರೂ.ಗೆ ಏರಿಕೆಯಾಗಿದೆ.



Join Whatsapp