ಬೆಳ್ಳಂಬೆಳಗ್ಗೆ ಜಮೀರ್ ಅಹ್ಮದ್ ಖಾನ್ ಗೆ ಎಸಿಬಿ ಶಾಕ್: ಐದು ಕಡೆ 50 ಅಧಿಕಾರಿಗಳಿಂದ ರೈಡ್..!

Prasthutha|

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಶಾಸಕ ಝಮೀರ್ ಅಹ್ಮದ್ ಖಾನ್‌ ಮನೆಗೆ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ಮಾಡಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

- Advertisement -

ಐಟಿ ಇಲಾಖೆಯಿಂದ ದೊರಕಿದ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು SP ಯತೀಶ್ ಚಂದ್ರ ರೈಡಿನ‌ ನೇತೃತ್ವ ವಹಿಸಿದ್ದಾರೆ.

ಜಮೀರ್ ಅಹ್ಮದ್ ಮನೆ, ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಸದಾಶಿವ ನಗರ ಗೆಸ್ಟ್ ಹೌಸ್, ಬನಶಂಕರಿಯ ಜಿಕೆ ಅಸೋಸಿಯೇಟ್ ಕಛೇರಿ ಮತ್ತು ಕಲಾಸಿಪಾಳ್ಯ ನ್ಯಾಷನಲ್ ಟ್ರಾವೆಲ್ಸ್ ಕಛೇರಿ ಸಹಿತ ಐದು ಕಡೆಗಳಲ್ಲಿ 50 ಎಸಿಬಿ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ಎಂದು ತಿಳಿದು ಬಂದಿದೆ.

Join Whatsapp