ಎಸಿ ಸ್ಫೋಟಗೊಂಡು ತಾಯಿ, ಇಬ್ಬರು ಮಕ್ಕಳು ಮೃತ್ಯು

Prasthutha|

ರಾಯಚೂರು: ಶಾರ್ಟ್ ಸರ್ಕ್ಯೂಟ್​ನಿಂದ ಎಸಿ ಸ್ಫೋಟಗೊಂಡ ಹಿನ್ನೆಲೆ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ನಡೆದಿದೆ.

- Advertisement -

ತಾಯಿ ರಂಜಿತಾ(33), ಮಕ್ಕಳಾದ ಮೃದಲ್(13), ತಾರುಣ್ಯ(5) ಮೃತರಾಗಿದ್ದು, ಮೂಲತಃ ಮಂಡ್ಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಸಿದ್ದಲಿಂಗಯ್ಯ ಸ್ವಾಮಿ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡಿದ್ದಾರೆ.

ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp