ಮುಸ್ಲಿಮರ ನರಮೇಧದ ಬಗ್ಗೆ ABVP ವಾಟ್ಸ್ ಆ್ಯಪ್ ಗುಂಪಿನಲ್ಲಿ ನಡೆಸಿದ ಚರ್ಚೆ ಸೋರಿಕೆ

Prasthutha|

ಹೊಸದಿಲ್ಲಿ:  ಮುಸ್ಲಿಮರ ನರಮೇಧದ ಬಗ್ಗೆ ABVP ಯ ವಾಟ್ಸಾಪ್ ಗುಂಪಿನಲ್ಲಿ ನಡೆದ ಚರ್ಚೆ ಸೋರಿಕೆಯಾಗಿರುವ ಬಗ್ಗೆ ವರದಿಯಾಗಿದೆ.

- Advertisement -

 ಮುಸ್ಲಿಮರ ನರಮೇಧದ ಕುರಿತು ABVP ಕಾರ್ಯಕರ್ತರು ನಡೆಸಿದ ವಾಟ್ಸ್ ಆ್ಯಪ್ ಚಾಟ್‍ಗಳ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  

‘ಎಬಿವಿಪಿ ಡಿಟಿಯು ಫ್ರೆಶರ್ಸ್’ ಎಂಬ ಹೆಸರಿನ ವಾಟ್ಸ್ ಆ್ಯಪ್ ಗುಂಪಿನಲ್ಲಿ ದಿಲ್ಲಿ ಟೆಕ್ನಲಾಜಿಕಲ್ ಯುನಿವರ್ಸಿಟಿ ವಿದ್ಯಾರ್ಥಿಗಳು, ಮುಸ್ಲಿಮರ  ನರಮೇಧ ಮತ್ತು ಸಾಮೂಹಿಕ ಮತಾಂತರದ ಕುರಿತು ಚರ್ಚಿಸಿದ್ದಾರೆ ಎಂದು sabrangindia.in ವರದಿ ಮಾಡಿದೆ.

- Advertisement -

ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಬಗ್ಗೆ ಮತ್ತು ಅವರನ್ನು ಹಿಂದು ಧರ್ಮಕ್ಕೆ ಮತಾಂತರಗೊಳಿಸುವ ಬಗ್ಗೆ ಕೋರ್ಸ್ ನಡೆಸಬೇಕು. ಮುಸ್ಲಿಮರನ್ನು ನಿರ್ಮೂಲನೆ ಮಾಡಲು ಬಾಂಬ್ ಸ್ಫೋಟ ನಡೆಸಬೇಕು. ಅವರ ವಿರುದ್ಧ ಪ್ರತೀಕಾರ ತೀರಿಸಲು ಸಾಮೂಹಿಕ ನರಮೇಧ ಅಥವಾ ಸಾಮೂಹಿಕ ಸಂತಾನಹರಣ ನಡೆಸಬೇಕು ಎಂದು ಗ್ರೂಪಿನಲ್ಲಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

Join Whatsapp