ಮಹಿಳೆಗೆ ಕಿರುಕುಳ ಆರೋಪ | ABVPಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಂಧನ

Prasthutha|

ಚೆನ್ನೈ: ABVPಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ಬಯ್ಯ ಶನ್ಮುಗಂ ಅವರನ್ನು ಚೆನ್ನೈ ಪೊಲೀಸರು ಮಹಿಳೆಯ ಮನೆಯ ಪ್ರವೇಶದ್ವಾರದಲ್ಲಿ ಮೂತ್ರ ವಿಸರ್ಜನೆ ಮಾಡಿ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ.

- Advertisement -

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಾಜಿ ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ಬಯ್ಯ ಶನ್ಮುಗಂರನ್ನು ನಂಗನಲ್ಲೂರ್ ನಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಮಹಿಳಾ ನೆರೆಹೊರೆಯವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಬ್ಬಯ್ಯ ಶನ್ಮುಗಂ ಎರಡು ವರ್ಷಗಳ ಹಿಂದೆ ಆಡಂಬಕ್ಕಂನಲ್ಲಿ ವೃದ್ಧ ಮಹಿಳೆಯ ಮನೆ ಬಾಗಿಲಲ್ಲಿ ಮೂತ್ರ ವಿಸರ್ಜನೆ ಮಾಡಿದ್ದರು ಎಂದು ಆರೋಪಿಸಲಾಗಿದೆ, ಸಂತ್ರಸ್ತೆಯಿಂದ ಹೊಸ ದೂರು ಬಂದ ನಂತರ ಈಗ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Join Whatsapp