ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿದ್ದು ಕಲಬುರಗಿಯ ABVP ಜಿಲ್ಲಾ ಘಟಕದ ಅಧ್ಯಕ್ಷ ಅರುಣಾ ಪಾಟೀಲ ಎಂಬಾತನನ್ನು ಬಂಧಿಸಲಾಗಿದೆ.
ಕಲಬುರಗಿಯ ಅರುಣಾ ಪಾಟೀಲ್ ಸೇರಿದಂತೆ ರಾಯಚೂರಿನ ಅಭ್ಯರ್ಥಿ ಕೆ.ಪ್ರವೀಣಕುಮಾರ, ರಾಯಚೂರಿನ ಜೈಲಿನ ವಾರ್ಡನ್ ಚೇತನಾ ನಂದಗಾಂವ್, ಪರೀಕ್ಷಾ ಕೇಂದ್ರದಲ್ಲಿ ಇನ್ವಿಜಿಲೇಟರ್ ಗಳಾಗಿ ಕೆಲಸ ಮಾಡುತ್ತಿದ್ದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಸುಮಾ, ಸಿದ್ದಮ್ಮ ಮತ್ತು ಸಾವಿತ್ರಿ ಎಂಬವರನ್ನೂ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ
ಹಗರಣದಲ್ಲಿ ಭಾಗಿಯಾದವರ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ರಾಜ್ಯದಲ್ಲಿ ಹೊಸ ಕೋಲಾಹಲ ಸೃಷ್ಟಿಸಿದೆ