ಯತೀಂದ್ರ ಸಿದ್ದರಾಮಯ್ಯಗೆ ನಿಂದನೆ: ಯುವಕ ಪೊಲೀಸ್ ವಶ

Prasthutha|

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕನಕ ಜಯಂತಿ ಆಚರಣೆ ಸಿಎಂ ಪುತ್ರ ಯತೀಂದ್ರ ವೇದಿಕೆಯಲ್ಲಿ ಮಾತಾಡುವಾಗ ಯುವಕನೊಬ್ಬ ಅವರನ್ನು ಅವಾಚ್ಯವಾಗಿ‌ ನಿಂದಿಸಿದ್ದು, ಅಲ್ಲಿದ್ದ ಪೊಲೀಸರು ಆತನನ್ನು ಹಿಡಿದುಕೊಂಡು ವಶಕ್ಕೆ ಪಡೆದು ದರದರನೇ ಎಳೆದೊಯ್ದ ಘಟನೆ ನಡೆದಿದೆ.

- Advertisement -

ಯತೀಂದ್ರ ಸಿದ್ದರಾಮಯ್ಯ, ಬಿಜೆಪಿಯವರು ರಾಮನನ್ನ ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ ಎನ್ನುತ್ತಿರುವಾಗ. ಬುಲೆಟ್‌ ಬೈಕ್‌‌ನಲ್ಲಿ ಮೈದಾನದೊಳಕ್ಕೆ ಬಂದ ಯುವಕ ರಂಜಿತ್ ಎಂಬಾತ ಯತೀಂದ್ರರನ್ನ ಬಾಯಿಗೆ ಬಂದಂತೆ ಬೈದು ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದ. ಆತ ಯಾರು ಅಂತ ಹುಡುಕೋಷ್ಟರಲ್ಲಿ ಮತ್ತೆ ಅದೇ ಯುವಕ ಬೈಕ್‌ನಲ್ಲಿ ಮೈದಾನಕ್ಕೆ ಬಂದಿದ್ದಾನೆ. ಕೂಡಲೇ ಅಲ್ಲಿದ್ದ ಪೊಲೀಸರು ಯುವಕನ್ನು ಹಿಡಿದುಕೊಂಡು ವಶಕ್ಕೆ ಪಡೆದಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಮಾತನಾಡುತ್ತಾ, ಕೇಂದ್ರ ಸರ್ಕಾರ ಯಾವ ಭರವಸೆನೂ ಈಡೇರಿಸಿಲ್ಲ.ಆದರೂ ಮೋದಿ ಕಾ ಗ್ಯಾರಂಟಿ ಅಂತಿದ್ದಾರೆ. ರಾಮಮಂದಿರ ಮಾಡೋದು ಗ್ಯಾರಂಟೀನಾ? ಸರ್ಕಾರದ ಕೆಲಸ ದೇವಸ್ಥಾನಗಳನ್ನು ಕಟ್ಟೋದಾ? ಅದೊಂದು ಭಾಗ ಅಷ್ಟೇ, ರಾಮಮಂದಿರ ಕಟ್ಟೋದಿಕ್ಕಿಂತ ಹೆಚ್ಚಾಗಿ ರಾಮ ರಾಜ್ಯ ನಿರ್ಮಾಣ ಆಗಬೇಕು ಎಂದು ಹೇಳಿದ್ದರು.

- Advertisement -

ಸಮಾಜದಲ್ಲಿ ಸಮಾನತೆ ಆದಾಗ, ಹಸಿವು ಮುಕ್ತ ಆದಾಗ, ಯುವಕರಿಗೆ ಸರಿಯಾದ ಶಿಕ್ಷಣ ಉದ್ಯೋಗ ಮಹಿಳೆಯರಿಗೆ ರಕ್ಷಣೆ ಸಿಕ್ಕಾಗ ರಾಮರಾಜ್ಯ ಆಗುತ್ತೆ. ದೇವರು ಸಾಕ್ಷಾತ್ಕಾರ ಆಗಬೇಕಾದ್ರೆ ದೊಡ್ಡ ದೊಡ್ಡ ಭವ್ಯವಾದ ದೇವಸ್ಥಾನ ಕಟ್ಟಬೇಕಿಲ್ಲ. ಸಾವಿರಾರು ವರ್ಷಗಳಿಂದ ಹಿಂದೂ ಧರ್ಮ ಇದೆ, ನೂರಾರು ದೇವಸ್ಥಾನಗಳಿವೆ. ಆದರೆ ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಹೋಗಿಲ್ಲ ಎಂದು ಯತೀಂದ್ರ ಬಿಜೆಪಿಯನ್ನು ಟೀಕಿಸಿದ್ದರು.



Join Whatsapp