ಇಸ್ಲಾಂ, ಕ್ರೈಸ್ತ ಧರ್ಮದ ನಿಂದನೆ| ಬಾಬಾ ರಾಮ್‌ದೇವ್‌ರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಲು SDPI ಒತ್ತಾಯ

Prasthutha|

ಹೊಸದಿಲ್ಲಿ: ರಾಜಸ್ಥಾನದ ಬಾರ್ಮರ್‌ನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಇಸ್ಲಾಂ, ಕ್ರಿಶ್ಚಿಯನ್ ಧರ್ಮ ಮತ್ತು ಅವರ ಅನುಯಾಯಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರ ನಡೆಯನ್ನು ಖಂಡಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಧರ್ಮ ನಿಂದನೆ ಕಾನೂನುಗಳ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಅವರನ್ನು ತಕ್ಷಣವೇ ಬಂಧಿಸಿ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದೆ.

- Advertisement -

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಫಿ, ರಾಮ್‌ದೇವ್ ಅವರು “ಎಲ್ಲಿಯವರೆಗೆ ಮುಸ್ಲಿಮರು ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸುವರೋ ಅಲ್ಲಿಯವರೆಗೆ ಭಯೋತ್ಪಾದನೆ ಮತ್ತು ಹಿಂದೂ ಹುಡುಗಿಯರನ್ನು ಅಪಹರಿಸುವುದು ಅವರ ಪ್ರಕಾರ ತಪ್ಪಲ್ಲ ಎಂದು ಭಾವಿಸುತ್ತಾರೆ” ಎಂದು ಹೇಳಿದ್ದಾರೆ. ಇದು ದೊಡ್ಡ ಸುಳ್ಳು, ಅವಹೇಳನಕಾರಿ ಮತ್ತು ಅವಮಾನಕರ ಹೇಳಿಕೆ ಎಂದು ಶಫಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಬಾ ರಾಮ್‌ದೇವ್ ಅವರ ಹೇಳಿಕೆಯು ದೇಶದ ಕಾನೂನಿಗೆ ವಿರುದ್ಧವಾದುದು ಮತ್ತು ಅದು ಅವರ ಮತಾಂಧ ಮನಸ್ಥಿತಿ ಮತ್ತು ಇಸ್ಲಾಂ, ಕ್ರಿಶ್ಚಿಯನ್ ಧರ್ಮ ಮತ್ತು ಅವರ ಅನುಯಾಯಿಗಳ ಮೇಲಿನ ದ್ವೇಷವನ್ನು ಪ್ರತಿಬಿಂಬಿಸುತ್ತದೆ ಎಂದು ಶಫಿ ಹೇಳಿದ್ದಾರೆ.

- Advertisement -

ರಾಮ್‌ದೇವ್ ಅವರ ಹೇಳಿಕೆ ಸುಳ್ಳು ಮತ್ತು ಇಸ್ಲಾಂ ಧರ್ಮವನ್ನು ಅಪಪ್ರಚಾರ ಮಾಡುವ ಉದ್ದೇಶದ್ದು ಎಂದು ಎಸ್‌ಡಿಪಿಐ ನಾಯಕ ಹೇಳಿದರು. ಯೇಸುವಿನ ಮುಂದೆ ನಿಂತರೆ ಪಾಪ ಪರಿಹಾರವಾಗುತ್ತದೆಯೇ ಎಂದು ಕ್ರಿಶ್ಚಿಯನ್ನರನ್ನು ಪ್ರಶ್ನೆ ಮಾಡಿರುವುದು ಅವರ ತುಚ್ಛ ಮನಸ್ಥಿತಿ ಮತ್ತು ಕ್ರಿಶ್ಚಿಯನ್ ಧರ್ಮದ ಬಗೆಗಿನ ಅವರ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಶಫಿ ಹೇಳಿದರು.

ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ನೋಯಿಸುವ ಉದ್ದೇಶದಿಂದ ಮಾಡಲಾಗಿರುವ ಈ ಕಾನೂನುಬಾಹಿರ ಭಾಷಣಕ್ಕಾಗಿ ರಾಮದೇವ್ ಅವರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಶಫಿ ಅವರು ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದರು.

Join Whatsapp