ಬೆಳ್ತಂಗಡಿಯಲ್ಲಿ ಇಸ್ಲಾಮ್ ಧರ್ಮದ ವಿರುದ್ಧ ನಿಂದನೆ: SDPIನಿಂದ ದೂರು ದಾಖಲು

Prasthutha|

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವೂರುನಲ್ಲಿ ಏಪ್ರಿಲ್ 6ರಂದು ನಡೆದ ‘ಪುರುಷರ ಕಟ್ಟುವುದು ‘ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ವಿರುದ್ಧ ನಿಂದನೆ ಮತ್ತು ಮುಸ್ಲಿಂ ಭಾವನೆಗೆ ಧಕ್ಕೆ ಮಾಡಿದವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಎಸ್’ಡಿಪಿಐ ಪಕ್ಷದ ಅಧ್ಯಕ್ಷ ನವಾಝ್ ಕಟ್ಟೆ ದೂರು ದಾಖಲಿಸಿದ್ದಾರೆ.

- Advertisement -


ಮುಸ್ಲಿಂ ಮಹಿಳೆಯರ ಬುರ್ಖಾ ಮತ್ತು ಪುರುಷರ ಟೋಪಿ ಹಾಕಿಕೊಂಡು ಕಿಡಿಗೇಡಿಗಳು ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿ ಕಟ್ಟಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ನೇತೃತ್ವವನ್ನು ನೀಡಿದವರು, ಆಯೋಜಕರು ಮತ್ತು ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಈ ಸಂದರ್ಭದಲ್ಲಿ ಎಸ್’ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ನವಾಝ್ ಕಟ್ಟೆ, ಕಾರ್ಯದರ್ಶಿಗಳಾದ ಫಝಲ್ ಉಜಿರೆ, ಸಾದಿಕ್ ಲಾಯಿಲ, ಶಮೀಮ್ ಯೂಸುಫ್, ಹುಸೈನ್ ಪಡಂಗಡಿ ಉಪಸ್ಥಿತರಿದ್ದರು.



Join Whatsapp