ಅಬುಧಾಬಿ ವಿಮಾನ ನಿಲ್ದಾಣದ ಬಳಿ ಸ್ಫೋಟ: ಡ್ರೋನ್ ದಾಳಿ ಶಂಕೆ

Prasthutha|

ಅಬುಧಾಬಿ: ಅಲ್ ಮುಸಾಫಾದಲ್ಲಿ ಪೆಟ್ರೋಲ್ ಸಾಗಿಸುತ್ತಿದ್ದ ಮೂರು ಟ್ಯಾಂಕರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸ್ಫೋಟ ಉಂಟಾಗಿದೆ ಎಂದು ಅಬುಧಾಬಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

- Advertisement -

ಇದು ಯಮನ್ ಮೂಲದ ಸಂಘಟನೆಯೊಂದು ನಡೆಸಿದ ಡ್ರೋನ್ ದಾಳಿ ಕೃತ್ಯವಾಗಿರಬಹುದು ಎಂಬ ಸಂಶಯ ಉಂಟಾಗಿದೆ.
ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಪ್ರದೇಶದಲ್ಲಿ ಸಣ್ಣ ಮಟ್ಟದ ಬೆಂಕಿ ದುರಂತ ನಡೆದಿದೆ ಎಂದು ಎಮಿರೇಟ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸ್ಫೋಟ ನಡೆದ ಸ್ಥಳದಲ್ಲಿ ಡ್ರೋನ್ ಮಾದರಿಯ ಸಣ್ಣ ಹಾರಾಟದ ವಸ್ತುವೊಂದು ಪತ್ತೆಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಅಬುಧಾಬಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Join Whatsapp