ಮೀಸಲಾತಿ ರದ್ದುಗೊಳಿಸುವುದೇ ಬಿಜೆಪಿ, ಆರೆಸ್ಸೆಸ್ ಹಿಡನ್ ಅಜೆಂಡಾ: ಯು.ಟಿ.ಖಾದರ್

Prasthutha|

ಬೆಂಗಳೂರು: ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು, ಪರಿಶಿಷ್ಟರು ಜಾತಿ ಮತ್ತು ಪಂಗಡದವರು ಸೇರಿದಂತೆ ಎಲ್ಲಾ ವರ್ಗಗಳಿಗೆ ಮೀಸಲಾತಿ ಪದ್ದತಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದೇ ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಹಿಡನ್ ಅಜೆಂಡಾ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಟೀಕಿಸಿದ್ದಾರೆ.

- Advertisement -

ಟ್ವೀಟ್ ಮಾಡಿರುವ ಅವರು,  2ಬಿಯಲ್ಲಿರುವ ಅಲ್ಪಸಂಖ್ಯಾತ ಮೀಸಲಾತಿ ರದ್ದತಿ ಬಗ್ಗೆ ಬಿಜೆಪಿ ಶಾಸಕ ನೀಡಿರುವ ಸಂವಿಧಾನ ವಿರೋಧಿ ಹೇಳಿಕೆಯು ಬಿಬಿಎಂಪಿ ಹಾಗೂ ಸ್ಥಳಿಯ ಸಂಸ್ಥೆಗಳ ಚುನಾವಣಾ ಮೀಸಲಾತಿಯನ್ನು ಗೊಂದಲಮಯಗೊಳಿಸಿ ವ್ಯವಸ್ಥಿತವಾಗಿ ರದ್ದುಪಡಿಸಿದಂತೆ, ಈ ಬಾರಿಯೂ 2A, 2B ಎಂದು ಇನ್ನಷ್ಟು ಕಗ್ಗಂಟುಗೊಳಿಸಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು, ಪರಿಶಿಷ್ಟರು ಜಾತಿ ಮತ್ತು ಪಂಗಡದವರು ಸೇರಿದಂತೆ ಎಲ್ಲಾ ವರ್ಗಗಳಿಗೆ ಮೀಸಲಾತಿ ಪದ್ದತಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದೇ ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಹಿಡನ್ ಅಜೆಂಡಾ ಎಂದು ಆರೋಪಿಸಿದ್ದಾರೆ.

ಮೀಸಲಾತಿ ರದ್ದುಗೊಳಿಸುವಂತೆ  ಕೋರ್ಟ್ ಮೆಟ್ಟಿಲೇರಿದ್ದು ಬಿಜೆಪಿ ಆರ್ ಎಸ್ ಎಸ್  ನ  ರಾಮಾ ಜೋಯಿಸ್ ಅವರು ಎಂಬುದು ಯಾರು ಮರೆಯಬಾರದು ಎಂದು ಖಾದರ್ ಹೇಳಿದ್ದಾರೆ.



Join Whatsapp