ಮಂಗಳೂರು: ಸೋಶಿಯಲ್ ಡೆಮೊಕ್ರಟಿಕ್ ಟ್ರೇಡ್ ಯೂನಿಯನ್ (SDTU) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಕಣ್ಣಂಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಕಲ್ಲಾಪು ಆಯ್ಕೆಯಾಗಿದ್ದಾರೆ.
SDTU ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆ ಬುಧವಾರ ಬಿಸಿರೋಡಿನ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷರಾಗಿ ಸಿದ್ದೀಕ್ ಕಣ್ಣಂಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಕಲ್ಲಾಪು, ಕಾರ್ಯದರ್ಶಿಯಾಗಿ ಮುಸ್ತಫಾ ಪರ್ಲಿಯಾ, ಕೋಶಾಧಿಕಾರಿಯಾಗಿ ಇಂತಿಯಾಜ್ ಬೆಂಗ್ರೆ, ಸದಸ್ಯರಾಗಿ ಹಾರಿಸ್ ಕೊಳ್ನಾಡ್, ಶಮೀಮ್ ಬೆಳ್ತಂಗಡಿ, ಇರ್ಫಾನ್ ಕಾನ, ಅಬ್ಬಾಸ್ ಪೆರಿಮಾರ್, ಫಿರೋಜ್ ಪಡುಬಿದ್ರಿ, ಇಮ್ರಾನ್ ಉಳ್ಳಾಲ, ಅಬ್ದುಲ್ ಸಲಾಮ್ ಬಜ್ಪೆ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಮಿಕ ಸಂಘಟನೆಯ ಅಗತ್ಯತೆ ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ನಮ್ಮ ಜವಾಬ್ದಾರಿಯ ಬಗ್ಗೆ ವಿವರಿಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ನಡೆಸಿಕೊಟ್ಟರು.
ಮುಸ್ತಫಾ ಪರ್ಲಿಯಾ ಸ್ವಾಗತಿಸಿ, ವಂದಿಸಿದರು.