ಜಾನುವಾರು ಹಗರಣದ ಹಣ ಗೃಹಸಚಿವರಿಗೆ ಹೋಗಿದೆ: ಅಮಿತ್ ಶಾ ವಿರುದ್ಧ ಅಭಿಷೇಕ್ ಬ್ಯಾನರ್ಜಿ ವಾಗ್ದಾಳಿ

Prasthutha|

ಕೋಲ್ಕತ್ತಾ: ಗೋವು ಕಳ್ಳಸಾಗಣೆಯ ಹಣ ಗೃಹಸಚಿವ ಮತ್ತು ಬಿಜೆಪಿಗೆ ತಲುಪುತ್ತದೆ ಎಂದು ಅಮಿತ್ ಶಾ ವಿರುದ್ಧ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

- Advertisement -

ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಎದುರಿಸಲು ಇಡಿ ಕಚೇರಿಗೆ ಬಂದ ಅಭಿಷೇಕ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ದೆಹಲಿಯಲ್ಲಿ ಇಡಿ ನನ್ನನ್ನು ವಿಚಾರಣೆ ನಡೆಸುತ್ತಿದೆ. ಕೋಲ್ಕತ್ತಾದಲ್ಲೂ ನನ್ನನ್ನು ಅನೇಕ ಸಲ ವಿಚಾರಣೆಗೊಳಪಡಿಸಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ನಾನು ಲಿಖಿತ ಹೇಳಿಕೆಯನ್ನು ನೀಡಿದ್ದು, ಈ ಸಂಬಂಧ ನಾನು ಸಿಬಿಐ ಅಥವಾ ಇಡಿಯನ್ನು ದೂರುತ್ತಿಲ್ಲ. ಕಾರಣ ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇಡಿ ಬ್ಯಾನರ್ಜಿ ಅವರನ್ನು ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ಭ್ರಷ್ಟಾಚಾರ ಮಾಡುತ್ತಿದ್ದವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳುತ್ತಿಲ್ಲ. ಅವರ ರಾಜಕೀಯ ಎದುರಾಳಿಗಳ ವಿರುದ್ಧ ತಕ್ಷಣ ಕ್ರಮ ಜರುಗಿಸುತ್ತಾರೆ. ಇದನ್ನೆಲ್ಲ ಜನರು ಅರ್ಥ ಮಾಡಿಕೊಂಡಿದ್ದಾರೆ. ರಾಜಕೀಯವಾಗಿ ನಮ್ಮ ವಿರುದ್ಧ ಹೋರಾಡಲು ಸಾಧ್ಯವಾಗದವರು ಇಡಿ ಮತ್ತು ಸಿಬಿಐ ಅನ್ನು ಬಳಸಿಕೊಂಡು ನಮ್ಮನ್ನು ಹೆದರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾವುದೇ ಸಿಬಿಐ ಅಥವಾ ಇಡಿ ದಾಳಿ ನಡೆದಿಲ್ಲ ಎಂದ ಟಿಎಂಸಿ ನಾಯಕ, ಹೊಸ ಸರ್ಕಾರ ರಚನೆಯಾದ ಬಳಿಕ ಬಿಹಾರದಲ್ಲಿ ಸಿಬಿಐ ದಾಳಿಗಳು ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ

ಜಾರ್ಖಂಡ್’ನಲ್ಲಿ ಸರ್ಕಾರವನ್ನು ಉರುಳಿಸಲು ಬಿಜೆಪು ಸಾಕಷ್ಟು ಕಸರತ್ತು ನಡೆಸಿದ್ದು, ಇದು ಬಿಜೆಪಿಯ ನೈಜ ಮುಖವಾಗಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಅಳಿಯ ತಿಳಿಸಿದ್ದಾರೆ.




Join Whatsapp