ಭಾರತೀಯ ಕೃಷಿ ಕ್ಷೇತ್ರದ ಪ್ರಮುಖ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ನಿಧನ

Prasthutha|

ನವದೆಹಲಿ: ಭಾರತದ ಗ್ರಾಮೀಣ ಆರ್ಥಿಕ, ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಯೋಜನಾ ಆಯೋಗದ ಮಾಜಿ ಸದಸ್ಯ ಪ್ರೊಫೆಸರ್ ಅಭಿಜಿತ್ ಸೇನ್ ಅವರು ಕಳೆದ ರಾತ್ರಿ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

- Advertisement -

ರಾತ್ರಿ 11 ಗಂಟೆ ಸುಮಾರಿಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸಾಗಿಸಿವ ಮಧ್ಯದಲ್ಲಿಯೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಎಂದು ಅವರ ಸಹೋದರ, ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಅಧ್ಯಕ್ಷ ಮತ್ತು ಭಾರತದ ಮುಖ್ಯ ಸಂಖ್ಯಾಶಾಸ್ತ್ರಜ್ಞರಾಗಿದ್ದ ಅರ್ಥಶಾಸ್ತ್ರಜ್ಞ ಪ್ರೊನಬ್ ಸೇನ್ ಹೇಳಿದರು.

ದೆಹಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ (ಜೆಎನ್ಯು) ಪ್ರಾಧ್ಯಾಪಕರಾಗಿದ್ದ ಅಭಿಜಿತ್ ಅವರು, ಸುಮಾರು ನಾಲ್ಕು ದಶಕಗಳ ಕಾಲ ದೇಶದ ಆರ್ಥಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದರು. ಕೇಂದ್ರ ‘ಕೃಷಿ ವೆಚ್ಚ ಹಾಗೂ ಬೆಲೆ’ ಆಯೋಗದ ಅಧ್ಯಕ್ಷ ಸೇರಿದಂತೆ ಅನೇಕ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

- Advertisement -

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಮೊದಲ ಎನ್ ಡಿಎ ಸರ್ಕಾರದಲ್ಲಿ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಅಧ್ಯಕ್ಷರಾಗಿದ್ದ ಅಭಿಜಿತ್ ಸೇನ್ ಅವರು ಜುಲೈ 2000 ರಲ್ಲಿ ಸಲ್ಲಿಸಿದ ದೀರ್ಘಾವಧಿ ಧಾನ್ಯ ನೀತಿ ಕುರಿತ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಬರೆದಿದ್ದರು.

ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಭಿಜಿತ್ ಸೇನ್ ಅವರು 2004 ರಿಂದ 2014 ರ ಅವಧಿಯಲ್ಲಿ ಕೇಂದ್ರ ಯೋಜನಾ ಆಯೋಗದ (ಈಗ ನೀತಿ ಆಯೋಗ) ಸದಸ್ಯರಾಗಿದ್ದರು.

Join Whatsapp