ಎಬಿಜಿ ಹಡಗು ಕಟ್ಟೆಯ ಬ್ಯಾಂಕು ವಂಚನೆ ಪ್ರಕರಣ: ಹಲವೆಡೆ ಇಡಿ ದಾಳಿ

Prasthutha|

ನವದೆಹಲಿ: ಎಬಿಜಿ ಹಡಗು ನಿರ್ಮಾಣ ಕಟ್ಟೆಯ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ, ಹಲವು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

- Advertisement -

ಸಂಸ್ಥೆಯ ವಿರುದ್ಧ ಸಿಬಿಐ ಫೆಬ್ರವರಿಯಲ್ಲಿ ದಾಖಲಿಸಿದ ಎಫ್ಐಆರ್ ಅಧ್ಯಯನ ಮಾಡಿ ಎಬಿಜಿ ಹಡಗು ನಿರ್ಮಾಣ ಕಟ್ಟೆ ಸಂಸ್ಥೆಯ ಮೇಲೆ ಅಕ್ರಮ ಹಣ ವರ್ಗಾವಣೆಯ ಮೊಕದ್ದಮೆಯನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ.

ಜಾರಿ ನಿರ್ದೇಶನಾಲಯದವರು ಮಂಗಳವಾರ ಮುಂಬಯಿ, ಪೂನಾ, ಸೂರತ್ ಗಳಲ್ಲಿ ಈ ಸಂಸ್ಥೆಯ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಹತ್ತಾರು ನೆಲೆಗಳ ಮೇಲೆ ದಾಳಿ ನಡೆಸಿದರು.  

- Advertisement -

ಎಬಿಜಿ ಹಡಗು ನಿರ್ಮಾಣ ಕಟ್ಟೆ ಸಂಸ್ಥೆ ರೂ. 22,842 ಕೋಟಿ ಬ್ಯಾಂಕು ವಂಚನೆ ನಡೆಸಿದ್ದು, ಹಣಗಳನ್ನು ಅಕ್ರಮವಾಗಿ ಬೇರೆ ಬೇರೆಯದಕ್ಕೆ ವರ್ಗಾಯಿಸಿದೆ ಎಂದು ಆರೋಪಿಸಲಾಗಿದೆ.

ಕೇಂದ್ರೀಯ ಏಜೆನ್ಸಿಯಾದ ಇಡಿ ಅಧಿಕಾರಿಗಳು ಮಂಗಳವಾರ ಒಟ್ಟು ಕಚೇರಿ ಮನೆ ಸೇರಿ 26 ಕಡೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ. ಪಿಎಂಎಲ್ಎ- ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ದಾಳಿಗಳು ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕುಗಳಿಗೆ ಒಟ್ಟಾರೆ ರೂ. 22,842 ಕೋಟಿ ರೂಪಾಯಿ ವಂಚನೆ ಮಾಡಿರುವುದಾಗಿ ಸಿಬಿಐನವರು ತನಿಖೆ ನಡೆಸಿ ಎಬಿಜಿ ಹಡಗು ಕಟ್ಟೆ ಕಂಪೆನಿಯ ಚೇರ್ಮನ್ ಹಾಗೂ ನಿರ್ದೇಶಕ ರಿಷಿ ಕಮ್ಲೇಶ್ ಅಗರ್ವಾಲ್ ಮತ್ತು ಇತರರನ್ನು ವಂಚನೆ ಪ್ರಕರಣದಡಿ ಬಂಧಿಸಿದ್ದರು.

ಸಿಬಿಐ ಮೊಕದ್ದಮೆಯನ್ನು ಅಧ್ಯಯನ ಮಾಡಿದ ಜಾರಿ ನಿರ್ದೇಶನಾಲಯದವರು, ಅಕ್ರಮ ಎಸಗಿದವರು ಹಣವನ್ನು ಅಕ್ರಮವಾಗಿ ತಮ್ಮ ಬಳಕೆಗೆ, ವೈಯಕ್ತಿಕ ಕಂಪೆನಿಗಳಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎಂದು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಕಾರ್ಯಕಾರಿ ನಿರ್ದೇಶಕ, ಸಂತಾನಂ ಮುತ್ತುಸ್ವಾಮಿ, ನಿರ್ದೇಶಕರಾದ ಅಶ್ವಿನಿ ಕುಮಾರ್, ಸುಶೀಲ್ ಕುಮಾರ್ ಅಗರ್ವಾಲ್, ರವಿ ವಿಮಲ್ ನವೇತಿಯಾ ಇವರನ್ನೆಲ್ಲ ಬಂಧಿಸಿತ್ತು. ಜೊತೆಗೆ ಇವರ ಮತ್ತು ಸದರಿ ಹಡಗು ಕಟ್ಟೆ ಸಂಬಂಧಿತರೆಲ್ಲರ ಮೇಲೆ ಭಾರತೀಯ ದಂಡ ಸಂಹಿತೆಯಡಿ ಭ್ರಷ್ಟಾಚಾರ ತಡೆ ಕಾಯ್ದೆಗಳಡಿ ಕ್ರಿಮಿನಲ್ ಸಂಚು, ವಂಚನೆ, ನಂಬಿಕೆ ದ್ರೋಹ, ಅಧಿಕೃತ ಸ್ಥಾನಮಾನಗಳ ದುರುಪಯೋಗ  ಮೊಕದ್ದಮೆಗಳನ್ನು ಹೂಡಲಾಗಿದೆ.



Join Whatsapp