ಕರ್ನಾಟಕ ಮುಸ್ಲಿಮ್ ಯುನಿಟಿ ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಸತ್ತಾರ್ ನೇಮಕ

Prasthutha|


ಬೆಂಗಳೂರು: ಕರ್ನಾಟಕ ಮುಸ್ಲಿಮ್ ಯುನಿಟಿ- KMU ರಾಜ್ಯ ಸಮಿತಿಯನ್ನು ರಚಿಸಲಾಗಿದೆ.

- Advertisement -


ಕಾರ್ಯಾಧ್ಯಕ್ಷರಾಗಿ ಸಮಾಜ ಸೇವಕ, ಚಿಂತಕರು, ನಿವೃತ್ತ ಪೊಲೀಸ್ ಅಧಿಕಾರಿ G A ಬಾವ, ರಾಜ್ಯಾಧ್ಯಕ್ಷರಾಗಿ ಮುಸ್ಲಿಮ್ ಸಮುದಾಯದ ಹಿರಿಯ ಮುಖಂಡರು, ಉದ್ಯಮಿ ಅಬ್ದುಲ್ ಸತ್ತಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಯುವ ನಾಯಕ ಡಾ. ಖಾಸಿಂ ಸಾಬ್, ರಾಜ್ಯ ಉಪಾಧ್ಯಕ್ಷರಾಗಿ T M ನಾಸಿರ್ ಇಂಪಾಲ್, ಉತ್ತರ ಕರ್ನಾಟಕ ರಾಜ್ಯ ಸಂಚಾಲಕರಾಗಿ ಅಬ್ದುಲ್ ಜಬ್ಬಾರ್ ಕಲ್ಬುರ್ಗಿ ಹಾಗು ದಕ್ಷಿಣ ಕರ್ನಾಟಕ ರಾಜ್ಯ ಸಂಚಾಲಕರಾಗಿ ಅಬ್ದುಲ್ ವಹೀದ್ ಅಹ್ಮದ್ ಮಾಗುಂಡಿ ಆಯ್ಕೆಯಾಗಿದ್ದಾರೆ.


ರಾಜ್ಯದ ಮುಸ್ಲಿಮರ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ, ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಪಾಲು ಹಾಗು ಮುಸ್ಲಿಮರ ಮೀಸಲಾತಿಗಾಗಿ ಕರ್ನಾಟಕ ಮುಸ್ಲಿಮ್ ಯುನಿಟಿ ಶ್ರಮಿಸುತ್ತಿದೆ. ಈಗಾಗಲೇ ರಾಜ್ಯಾದ್ಯಂತ ಜನಪರ, ಜಾತ್ಯತೀತ, ಪ್ರಗತಿಪರ ವಿಶೇಷವಾಗಿ ಮುಸ್ಲಿಮ್ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.



Join Whatsapp