ತನ್ನ ಆಪ್ತರನ್ನು ಬಿಜೆಪಿಗೆ ಸೇರಿಸಿ ವಿರೋಧ ಪಕ್ಷದ ನಾಯಕನಾಗಿ ಮೆರೆಯುತ್ತಿರುವ ಸಿದ್ದರಾಮಯ್ಯರಿಂದ SDPIಗೆ ಪಾಠ ಕಲಿಯುವ ಅಗತ್ಯವಿಲ್ಲ : ಅಬ್ದುಲ್ ಮಜೀದ್

Prasthutha|

ಮಂಗಳೂರು : 2018ರ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ಆಡಳಿತ ಅಧಿಕಾರಕ್ಕೆ ಬಂತು.ಆದರೆ ಕುಮಾರಸ್ವಾಮಿಯನ್ನು ಅಧಿಕಾರವನ್ನು ನಡೆಸಲು ಬಿಡದೆ ಕೆಲವೇ ತಿಂಗಳಲ್ಲಿ ತಮ್ಮ ಆಪ್ತ 14 ಶಾಸಕರನ್ನು ಬಿಜೆಪಿಯೊಂದಿಗೆ ಸೇರುವಂತೆ ಮಾಡಿ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸಿ ಇಂದು ವಿರೋಧ ಪಕ್ಷದ ನಾಯಕನಾಗಿ ಮೆರೆಯುತ್ತಿರುವ ಸಿದ್ದರಾಮಯ್ಯ, ತಾವು ಮಾಡಿದ ಕುತಂತ್ರ ರಾಜಕೀಯವನ್ನು ರಾಜ್ಯದ ಜನತೆ ತಿಳಿಯದಷ್ಟು ಮೂರ್ಖರಲ್ಲ ಎಂದು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಇಂದು ದ.ಕ.ಜಿಲ್ಲೆಯ ಮಂಗಳೂರು ಸಮೀಪದ ಮಲ್ಲೂರು ಗ್ರಾಮದ ನೂತನ ಅಧ್ಯಕ್ಷರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಹೇಳಿದ್ದಾರೆ.

- Advertisement -

ದೇಶದಲ್ಲಿ 7 ರಾಜ್ಯಗಳಲ್ಲಿ 120ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಹೋಗುವ ಮೂಲಕ ಬಿಜೆಪಿಯನ್ನು ಹಲವಾರು ರಾಜ್ಯಗಳಲ್ಲಿ ಅಧಿಕಾರಕ್ಕೆ ತಂದು ಬಿಜೆಪಿಯ ಬಿ ಟೀಮ್ ಯಾರೆಂಬುದನ್ನು ನಿಮ್ಮ ಪಕ್ಷದವರೇ ದೇಶಾದ್ಯಂತ ಸಾಬೀತುಪಡಿಸಿರಬೇಕಾದರೆ ಯಾವ ನೈತಿಕತೆಯ ಮೇಲೆ ಎಸ್ಡಿಪಿಯ ಮೇಲೆ ಆರೋಪ ಮಾಡುತ್ತೀರಿ ಎಂದು ಮಾರ್ಮಿಕವಾಗಿ ಅವರು ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.

ಇತ್ತೀಚಿಗೆ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯನವರು SDPI ಪಕ್ಷ ಬಿಜೆಪಿಯ ಬಿ ಟೀಮ್ ಎಂದು ಆರೋಪಿಸಿರುವುದಕ್ಕೆ ಮಜೀದ್ ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

Join Whatsapp