ಶೋಷಣೆ ಹಾಗೂ ಗುಲಾಮಗಿರಿಯ ರಾಜಕೀಯ ವ್ಯವಸ್ಥೆಗೆ ತಿಲಾಂಜಲಿ ನೀಡಿ ಸ್ವಾಭಿಮಾನ, ಮತ್ತು ಸ್ವತಂತ್ರ ರಾಜಕೀಯದ ಶಕ್ತಿಯನ್ನು ಬಲಪಡಿಸಲು ಅಬ್ದುಲ್ ಮಜೀದ್ ಮೈಸೂರು ಕರೆ

Prasthutha|

ಮಂಗಳೂರು:  ಶೋಷಣೆ, ಗುಲಾಮಗಿರಿ, ಸ್ವಜನ ಪಕ್ಷಪಾತ, ಅನೀತಿ,ಅಕ್ರಮಗಳ ಕೂಟವಾಗಿರುವ ದೇಶದ ರಾಜಕೀಯ ವ್ಯವಸ್ಥೆಯನ್ನು  ಕೊನೆಗೊಳಿಸಿ ಸ್ವಾಭಿಮಾನ ಮತ್ತು ಸ್ವತಂತ್ರ ಚಿಂತನೆ, ಸಾಮಾಜಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಮಾಣಿಕ ರಾಜಕೀಯ ಶಕ್ತಿಯಾಗಿ ದೇಶದೆಲ್ಲೆಡೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವನ್ನು ಬಲಪಡಿಸಬೇಕು, ಆ ಮೂಲಕ ಮುಂದಿನ ಪೀಳಿಗೆಗೆ ಸುಂದರ ಸಮಾಜವೊಂದನ್ನು ನಿರ್ಮಾಣ ಮಾಡಬೇಕಾದ ನಮ್ಮ ಪ್ರಾಮಾಣಿಕ ಉದ್ದೇಶದ ಸಾಕಾರಕ್ಕಾಗಿ ಪ್ರತಿಯೊಬ್ಬ ದೇಶಪ್ರೇಮಿಯೂ ಪ್ರಯತ್ನ ಪಡಬೇಕು ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಕರೆ ನೀಡಿದರು .

- Advertisement -

 ಅವರು ಎಸ್.ಡಿ.ಪಿ.ಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಮಂಗಳೂರಿನ ಹೆರಾ ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಬಾಗವಹಿಸಿ ಕಾರ್ಯಕರ್ತರು, ಮತ್ತು ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು

 ದೇಶದಲ್ಲಿ ನಡೆಯುತ್ತಿರುವ ಸರಕಾರಿ ಪ್ರಾಯೋಜಿತ ಅನ್ಯಾಯ, ಅಕ್ರಮ, ಭ್ರಷ್ಟಾಚಾರ, ಅನೀತಿಯನ್ನು ಕೊನೆಗೊಳಿಸಲು ಎಸ್.ಡಿ.ಪಿ.ಐ ಒಂದೇ ಪರಿಹಾರ. ಆಡಳಿತ ನಡೆಸಿದ ಮತ್ತು ಪ್ರಸಕ್ತ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳು ಜನತೆಗೆ ಹಲವಾರು ಸಲ ನಂಬಿಕೆ ದ್ರೋಹ ಮಾಡಿದೆ, ಅದ್ದರಿಂದ ಬೇರೆ ಯಾವುದೇ ಪಕ್ಷಗಳನ್ನು  ಇಂದು ನಂಬುವ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಇಲ್ಲದ ಕಾರಣ ನಮ್ಮ ಕಾರ್ಯಕರ್ತರು, ಸಾರ್ವಜನಿಕರು ಎಸ್.ಡಿ.ಪಿ.ಐ  ಪಕ್ಷವನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದರು. ಎಪ್ಪತ್ತಾರು ವರ್ಷ ಗುಲಾಮರಾಗಿ  ಬದುಕಿದ್ದು ಸಾಕು. ರಾಜ್ಯದಲ್ಲಿ ಇಂದು ಒಂಬತ್ತು ಮಂದಿ ಮುಸ್ಲಿಂ ಶಾಸಕರಿದ್ದರೂ ಮುಸ್ಲಿಮರ ವಿರುದ್ಧ ನಡೆಯುವ ಯಾವುದೇ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಮೌನ ವಹಿಸಿರುವುದು ಈ ಸಮುದಾಯದ ದೊಡ್ಡ ದುರಂತವೇ ಸರಿ , ದಲಿತ ಸಮುದಾಯದ ಶಾಸಕರು, ಸಂಸದರು ಇದ್ದರೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ ದಲಿತ, ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಪಕ್ಷಗಳು ಈ ಸಮುದಾಯವನ್ನು ಕೇವಲ ಓಟು ಬ್ಯಾಂಕ್ ಆಗಿ ಬಳಸಿದ್ದೇ ಇದಕ್ಕೆ ಮೂಲ ಕಾರಣ. ಕಾಂಗ್ರೆಸ್ ಪಕ್ಷ ಪ್ಯಾಲೇಸ್ತೀನ್ ಪರ ಎಂದು ಕರೆ ಕೊಡುತ್ತದ್ದೆ ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ಯಾಲೇಸ್ತೀನ್ ಪರ ಪ್ರತಿಭಟನೆ ಮಾಡಿದವರ ಮೇಲೆ ಎಫ್.ಐ.ಆರ್ ಹಾಕಿ ಜೈಲಿಗೆ ಕಳಿಸುತ್ತಿದೆ   ಇದನೆಲ್ಲ ಕೊನೆಗೊಳಿಸಲು ಅಲ್ಪಸಂಖ್ಯಾತರು ,ದಲಿತರು, ಹಿಂದುಳಿದ ಸಮುದಾಯಗಳು  ರಾಜಕೀಯವಾಗಿ ಬಲಿಷ್ಠಗೊಂಡು, ನೈಜ ಪ್ರಜಾಪ್ರಭುತ್ವದ ರಾಜಾಧಿಕಾರವನ್ನು ಪಡೆಯಬೇಕು ಎಂದು ಈ ಸಂದರ್ಭದಲ್ಲಿ ಕರೆಕೊಟ್ಟರು.

- Advertisement -

 ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಾಗವಹಿದ ದಕ್ಷಿಣ ಕನ್ನಡ  ಜಿಲ್ಲಾದಕ್ಷರಾದ ಅನ್ವರ್ ಸಾದತ್ ಬಜತ್ತೂರುರವರು ಮಾತನಾಡಿ ಕೋಮುವಾದಿ ಬಿಜೆಪಿ ಸರ್ಕಾರ ಇದ್ದಾಗ ಹೇಗೆ ಮುಸ್ಲಿಮರ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಯುತ್ತಿತ್ತೋ ಅದೇ ರೀತಿ ಕಾಂಗ್ರೆಸ್ ಆಡಳಿತ ನಡೆಯುತ್ತಿರುವ ಇಂದು ಕೂಡ ನಡೆಯುತ್ತಿದೆ, ಅಲ್ಲದೆ  ಹಲ್ಲೆಗೈದ ಕೋಮುವಾದಿ  ಶಕ್ತಿಗಳು ನಿರಾಯಾಸವಾಗಿ ಒಂದೆರಡು ದಿನದಲ್ಲಿ ಹೊರಗೆ ಬರುತ್ತಿದ್ದಾರೆ. ಬಿಜೆಪಿ ಎಂಬ ಹೆಸರು ಬದಲಾಗಿ ಕಾಂಗ್ರೆಸ್ ಸರಕಾರ ಬಂದಿದೆ ಹೊರತು ಇಲ್ಲಿನ ಆಡಳಿತ ವ್ಯವಸ್ಥೆ, ಅಧಿಕಾರಿ ವರ್ಗ ಮತ್ತು ಬಿಜೆಪಿ ಬಿಟ್ಟು ಹೋದ ಸಂಘಪರಿವಾರದ ಕೋಮುವಾದಿ ಮನಸ್ಥಿತಿ ಹಾಗೂ ಫ್ಯಾಸಿಸಂನ ಚಿಂತನೆಗಳು ಯಥಾ ರೂಪದಲ್ಲಿ  ಬಾಕಿಯಾಗಿದೆ.

ಬಿಜೆಪಿಯನ್ನು ಸೋಲಿಸಬೇಕೆಂದು ಕಾಂಗ್ರೆಸ್ ಸಹಿತ ಹಲವಾರು ಪಕ್ಷಗಳು  ಒಂದು ಗೂಡಿ I.N.D.I.A ಎಂಬ ಒಕ್ಕೂಟವನ್ನು ರಚನೆ ಮಾಡಿದೆ ಆದರೆ ಅದೇ ಒಕ್ಕೂಟದ ಬಾಗವಾಗಿರುವ ಡಿಎಂಕೆ ಮುಖಂಡ ಹಾಗೂ ತಮಿಳುನಾಡಿನ ಸಚಿವರಾದ ಉದಯ ನಿಧಿ ಸ್ಟಾಲಿನ್ ಬಿಜೆಪಿ, ಸಂಘ ಪರಿವಾರದ ವಿಷ ಪೂರಿತ ಮನಸ್ಥಿತಿಯನ್ನು ದೇಶದಿಂದ ಕಿತ್ತೆಗೆಯಲು ಕರೆ ನೀಡಿದರೆ ಇದಕ್ಕೆ ಬೆಂಬಲಿಸುವ ಒಬ್ಬನೇ ಒಬ್ಬ ಎದೆಗಾರಿಕೆಯುಳ್ಳ ನಾಯಕ ಇಂಡಿಯಾ ಒಕ್ಕೂಟದಲ್ಲಿ ಕಾಣಲು ಸಿಗಲಿಲ್ಲ. ಇಲ್ಲಿ ಬಿಜೆಪಿಯನ್ನು ಸೋಲಿಸುವ ಮೊದಲು ಆರ್.ಎಸ್.ಎಸ್ ಎಂಬ ಕ್ಯಾನ್ಸರನ್ನು ನಿರ್ಮೂಲನೆ ಮಾಡಬೇಕಿದೆ. ಆದರೆ ಯಾವುದೇ ಶಾಸಕ, ಸಂಸದರಿಲ್ಲದೆ ಕಳೆದ ಹದಿನಾಲ್ಕು ವರ್ಷಗಳಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿಯ ಸಿದ್ದಾಂತದ ವಿರುದ್ಧ ಸೈದ್ಧಾಂತಿಕ ಮತ್ತು ರಾಜಕೀಯ ಹೋರಾಟ ಮಾಡುತ್ತ ಬಂದ ಏಕೈಕ ರಾಜಕೀಯ ಪಕ್ಷ ಎಸ್.ಡಿ.ಪಿ.ಐ ಮಾತ್ರ.. ನಮ್ಮ ನಾಯಕರು, ಕಾರ್ಯಕರ್ತರ ಮೇಲೆ ಸರ್ಕಾರಿ ಪ್ರೇರಿತ ಅನೇಕ ದಾಳಿಗಳು, ಸುಳ್ಳು ಪ್ರಕರಣಗಳು, ಬಂಧನಗಳು ನಡೆದರೂ ಎಲ್ಲೂ ಎದೆಗುಂದದೆ ಹಸಿವು ಮುಕ್ತ, ಭಯ ಮುಕ್ತ ದೇಶ ಕಟ್ಟಲು ರಾತ್ರಿ ಹಗಲೆನ್ನದೆ ಶಕ್ತಿಮೀರಿ ಪರಿಶ್ರಮ ಪಡುತ್ತಿರುವುದು ನಮ್ಮ ಬದ್ಧತೆ, ದೃಢ ವಿಶ್ವಾಸವನ್ನು ಹೆಚ್ಚಿಸಿದೆ. ಈ ದೇಶದಲ್ಲಿ ಒಂದು  ಕಾಡುಪ್ರಾಣಿ ಅಥವಾ ಸಾಕುಪ್ರಾಣಿಯನ್ನು ಯಾರಾದರೂ ಕೊಂದರೆ ಅವರ ವಿರುದ್ಧ ಹಲವಾರು ಕಾನೂನುಗಳಿವೆ ಆದರೆ ಮುಸಲ್ಮಾನರ, ದಲಿತರ ಹತ್ಯಾಕಾಂಡಗಳನ್ನು  ನರಮೇಧಗಳನ್ನು ನಡೆಸಿದವರು ಇಂದು ಅಧಿಕಾರದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ, ಅವರ ಅನುಯಾಯಿಗಳು ಇಂದು ಬೀದಿಯಲ್ಲಿ ಮುಸ್ಲಿಮರನ್ನು ಹುಡುಕಿ ಹುಡುಕಿ ಹಲ್ಲೆ ನಡೆಸುತ್ತಿದ್ದಾರೆ, ಯಾವುದಾದರೂ ಒತ್ತಡದ ಮೇಲೆ ಪೊಲೀಸರು ಕೊನೆಗೆ ಬಂಧಿಸಿದರೆ  ಒಂದೆರಡು ದಿನದಲ್ಲಿ ನಿರಾಯಾಸವಾಗಿ ಜೈಲಿನಿಂದ ಹೊರಗೆ ಬರುತಿದ್ದಾರೆ ಅದಕ್ಕೆ ಮಂಗಳೂರಿನ ಪಾಝಿಲ್, ಮಸೂದ್ ಮಂಡ್ಯದ ಇದ್ರೀಸ್ ಕೊಲೆ ಆರೋಪಿಗಳೇ ಸಾಕ್ಷಿ. ಆದರೆ ಅದೇ ಸ್ಥಳದಲ್ಲಿ ಮುಸ್ಲಿಮರು ಆರೋಪಿಗಳಾದರೆ ಅವರ ವಿರುದ್ಧ ದೇಶ ವಿರೋಧಿ ಯು.ಎ.ಪಿ.ಎ ಯಂತಹ ಕರಾಳ ಕಾನೂನುಗಳನ್ನು ಹಾಕಿ ವರ್ಷಗಟ್ಟಲೆ  ಬಂಧನದಲ್ಲಿ ಇಡಲಾಗುತ್ತಿದೆ. ಇಂತಹ ಅನ್ಯಾಯವನ್ನು ಕೊನೆಗಾಣಿಸಲು ಕಾರ್ಯಕರ್ತರು ಸಾಮಾಜಿಕ, ರಾಜಕೀಯ ರಂಗದಲ್ಲಿ ಮುಂದೆ ಬಂದು ಪಕ್ಷವನ್ನು ಗಟ್ಟಿ ಗೊಳಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಕ್ಬರ್ ರಾಝಾ ರವರು ವಹಿಸಿದ್ದರು ,ಈ ಸಂದರ್ಭದಲ್ಲಿ ಅಧ್ಯಕ್ಷೀಯ ಬಾಷಣ ಮಾಡಿದ ಅಕ್ಬರ್ ರವರು ಮುಂದಿನ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬೇಕಾದ ಪೂರ್ವ ತಯಾರಿಯನ್ನು ಈಗಲೇ ಆರಂಬಿಸುವ ಮೂಲಕ ಮಂಗಳೂರು ಮ.ನಾ.ಪದಲ್ಲಿ ಎಲ್ಲಾ ಕಡೆ ಸ್ಪರ್ಧಿಸಿ ಉತ್ತಮ ಫಲಿತಾಂಶ ಪಡೆಯಲು ಕಾರ್ಯಕರ್ತರು, ಹಿತೈಷಿಗಳು ಶಕ್ತಿಮೀರಿ ಶ್ರಮಿಸಬೇಕು, ಮಂಗಳೂರು ನಗರದಲ್ಲಿ ಜನಸಾಮಾನ್ಯರಿಗೆ ಎದುರಾಗುತ್ತಿರುವ ಜ್ವಲಂತ ಸಮಸ್ಯೆಗಳನ್ನು ಎತ್ತಿಕೊಂಡು ಹೋರಾಟ ನಡೆಸುವ ಮೂಲಕ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಬೇಕು ಎಂದು ತಿಳಿಸಿದರು

 ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಬೆಂಗರ ವಾರ್ಡ್ ಕಾರ್ಪೋರೇಟರ್ ಮುನೀಬ್ ಬೆಂಗರೆ , ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಕ್ಷೇತ್ರ ಕಾರ್ಯದರ್ಶಿ ಅಸ್ಫಕ್ ಪಾಂಡೇಶ್ವರ, ವಿಮನ್ಸ್ ಇಂಡಿಯಾ ಮೂವ್ಮೆಂಟ್ ಇದರ ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷೆ ಶಾಝಿಯಾ ಹಾಗೂ ಇತರ ನಾಯಕರು  ಉಪಸ್ಥಿತರಿದ್ದರು. ದಕ್ಷಿಣ ಕ್ಷೇತ್ರದ ಕೋಶಾಧಿಕಾರಿ  ಇಬ್ರಾಹಿಮ್ ದುಬಾಲ್ ರವರು ಕಾರ್ಯಕ್ರಮ ನಿರೂಪಿಸಿದರು,  ಉಪಾಧ್ಯಕ್ಷರಾದ ಸಿದ್ಧೀಕ್ ಬೆಂಗರೆ ಸ್ವಾಗತಿಸಿ, ಕಾರ್ಯದರ್ಶಿ ಬಶೀರ್ ಬಜಾರ್ ಧನ್ಯವಾದ ಸಮರ್ಪಿಸಿದರು, ಕಾರ್ಯಕ್ರಮದಲ್ಲಿ ಪಕ್ಷದ ಚಟುವಟಿಕೆಗಳ ಕುರಿತಾದ ಸಾಕ್ಷಚಿತ್ರವನ್ನು ಪ್ರದರ್ಶಿಸಲಾಯಿತು.



Join Whatsapp