ಹೀರಾಪೇರಿ, ವೆಲ್ ಕಂ ನಂತಹ ಬ್ಲಾಕ್ ಬಸ್ಟರ್ ಚಿತ್ರಗಳ ನಿರ್ಮಾಪಕ ಅಬ್ದುಲ್ ಗಫ್ಫಾರ್ ನಾಡಿಯಾಡ್ ವಾಲಾ ನಿಧನ

Prasthutha|

ಬೆಂಗಳೂರು: ಬಾಲಿವುಡ್ ಬ್ಲಾಕ್ ಬ್ಲಸ್ಟರ್ ಚಿತ್ರಗಳ ನಿರ್ಮಾಪಕ ಹಾಗೂ ಲೋಕೋಪಕಾರಿ ಅಬ್ದುಲ್ ಗಫ್ಫಾರ್ ನಾಡಿಯಾಡ್ ವಾಲಾ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೂವರು ಪುತ್ರಿಯರು ಹಾಗೂ ಮೂವರು ಪುತ್ರರು. ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಹೀರಾಪೇರಿ ಮತ್ತು ವೆಲ್ ಕಮ್ ನಂತಹ ಹಾಸ್ಯಮಯ ಚಿತ್ರಗಳನ್ನು ನಿರ್ಮಿಸಿ ಎ.ಜಿ. ನಡಿಯಾಡ್ ವಾಲಾ ಮನೆ ಮಾತಾಗಿದ್ದರು.

- Advertisement -

ಪಠಾಣ್ ಕೆ ಸನಮ್, ಮೇರಿ ಬಾಭಿ, ನಂತಹ ಪ್ಲಾಟಿನಂ ಜುಬಿಲಿ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಮಹಾಭಾರತ, ಮೇಳ, ಜೂಟಾಸಚ್ ಇನ್ನೂ ಅನೇಕ. ಪ್ರಶಸ್ತಿ ವಿಜೇತ ಚಲನಚಿತ್ರದ ನಿರ್ಮಾಪಕರಾಗಿದ್ದರು. ತಂದೆಯ ಪ್ರೇರಣೆಯಿಂದ ಅವರ ಪುತ್ರಿ ಮೆಹನಾಝ್ ನಿರ್ಮಿಸಿದ ‘ಇಟ್ಸ್ ಎ ಗರ್ಲ್ ಸೇವ್ ದ ಗರ್ಲ್ ಚೈಲ್ಡ್ ಚಿತ್ರ ಜಾಗತಿಕವಾಗಿ ವ್ಯಾಪಕ ಮೆಚ್ಚುಗೆ ಗಳಿಸಿತ್ತು ಮತ್ತು 22 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ತಮ್ಮ ತಂದೆಗೆ ಶ್ರದ್ಧಾಂಜಲಿ ಸಲ್ಲಿಸಿರುವ ಮೆಹನಾಝ್ ಅವರು ಅಬ್ದುಲ್ ಗಫ್ಫಾರ್ ನಾಡಿಯಾಡ್ ವಾಲಾ ವಿನಮ್ರ ಮತ್ತು ಪ್ರೀತಿಯ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರಿಂದ ಚಿತ್ರೋದ್ಯಮಕ್ಕೆ ಪ್ರೇರಣೆ ಸಿಗಲಿ ಎಂದು ಹೇಳಿದ್ದಾರೆ.

- Advertisement -

ಬಾಲಿವುಡ್ ಸ್ಟಾರ್ ಗಳಾದ ಅಭಿಷೇಕ್ ಬಚ್ಚನ್, ಅಜಯ್ ದೇವಗನ್ ಸೇರಿದಂತೆ ಅನೇಕ ಚಿತ್ರೋದ್ಯಮದ ಗಣ್ಯರು ಎ.ಜಿ.ನಡಿಯಾಡ್ ವಾಲಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.



Join Whatsapp