89.6% ಮತಗಳನ್ನು ಗೆಲ್ಲುವ ಮೂಲಕ 3ನೇ ಅವಧಿಗೆ ಈಜಿಪ್ಟ್ ಅಧ್ಯಕ್ಷರಾಗಿ ಅಬ್ದುಲ್ ಫತ್ತಾಹ್ ಅಲ್-ಸಿಸಿ ಆಯ್ಕೆಯಾಗಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಪ್ರಾಧಿಕಾರ ಘೋಷಿಸಿದೆ. ಯಾವುದೇ ಗಂಭೀರ ಸವಾಲುಗಳನ್ನು ಎದುರಿಸದೇ ಚುನಾವಣೆಯಲ್ಲಿ ಅವರು ಪ್ರಚಂಡ ವಿಜಯ ಸಾಧಿಸಿದ್ದಾರೆ.
ಈಜಿಪ್ಟ್ ನಿಧಾನಗತಿಯ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವಾಗ ಮತ್ತು ಈಜಿಪ್ಟ್ನ ಸಿನಾಯ್ ಪರ್ಯಾಯ ದ್ವೀಪದ ಗಡಿಯಲ್ಲಿರುವ ಗಾಝಾದಲ್ಲಿ ಯುದ್ಧದಿಂದ ಅಪಾಯವನ್ನು ನಿರ್ವಹಿಸಲು ಪ್ರಯತ್ನಿಸುತ್ತಿರುವಾಗ ಈ ಚುನಾವಣೆ ನಡೆದಿದೆ.
ಅಬ್ದುಲ್ ಫತ್ತಾಹ್ ಅಲ್-ಸಿಸಿ ದೀರ್ಘಕಾಲದಿಂದ ಅಸ್ಥಿರ ಪ್ರದೇಶದಲ್ಲಿ ಸ್ಥಿರತೆಯ ಭದ್ರಕೋಟೆಯಾಗಿ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದಾರೆ.
ಈ ಹಿಂದಿನ (2018) ಚುನಾವಣೆಯಲ್ಲಿ ಅಬ್ದುಲ್ ಫತ್ತಾಹ್ ಅಲ್-ಸಿಸಿ ಶೇಕಡ ಮತಗಳೊಂದಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈಜಿಪ್ಟ್‌ನಲ್ಲಿ ಪ್ರಸ್ತುತ ಮತದಾನ ಡಿಸೆಂಬರ್ 10 – ಡಿಸೆಂಬರ್ 12 ರಂದು ಮೂರು ದಿನಗಳ ಕಾಲ ನಡೆದಿತ್ತು.