ಆಯಾ ರಾಮಾ.. ಗಯಾ ರಾಮಾ ಎಂದು ಶೆಟ್ಟರ್ ಪಕ್ಷ ಬಿಟ್ಟು ಹೋದ್ರು: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Prasthutha|

ಕಲಬುರಗಿ: ಆಯಾ ರಾಮಾ.. ಗಯಾ ರಾಮಾ ಅಂತಾ ಪಕ್ಷ ಬಿಟ್ಟು ಹೋದ್ರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಬಿಜೆಪಿ ಸೇರ್ಪಡೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

- Advertisement -

ಈ ಸಂಬಂಧ ಕಲಬುರಗಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಯಾವ ಸನ್ನಿವೇಶದಲ್ಲಿ ಸೇರಿದ್ರು ಗೊತ್ತಿಲ್ಲ. ಅವರಿಗೆ ಬಿಜೆಪಿಯವರು ಕೈಕೊಟ್ಟರು, ಆಗ ನಾವು ಟಿಕೆಟ್ ಕೊಟ್ಟು ನಂತರ ಶಾಸಕ ಸಹ ಮಾಡಿದ್ವಿ. 6 ತಿಂಗಳ ಹಿಂದೆ ಶೆಟ್ಟರ್ ಅವರಿಗೆ ಏನಾಗಿತ್ತು?. ಯಾಕೆ ಪಕ್ಷ ಬಿಟ್ರಿ ಅಂತಾ ಶೆಟ್ಟರ್ ಅವರು ಉತ್ತರ ಕೊಡಲಿ ಎಂದು ಹೇಳಿದರು.

6 ತಿಂಗಳಲ್ಲಿ ನಾವು ಏನ್ ಇಷ್ಟು ಅನ್ಯಾಯ ಮಾಡಿದ್ವಿ?. ರಾಮಮಂದಿರ ಕುರಿತು 125 ವರ್ಷ ಪಾರ್ಟಿ ಸ್ಟ್ಯಾಂಡ್ ಒಂದೇ ಇದೆ. ನಮ್ಮ ಪಕ್ಷ ಯಾರ ಮೇಲೂ ನಿಂತಿಲ್ಲ. ಆಯಾ ರಾಮ ಗಯಾ ರಾಮ ಅಂತಾ ಬಿಟ್ಟು ಬಿಡ್ತೀವಿ. ಅವರು ಪಕ್ಷ ಬಿಡಲು ಕಾರಣ ತಿಳಿಸಲಿ ಎಂದು ತಿಳಿಸಿದರು.



Join Whatsapp