AAP v/s BJP: ದೆಹಲಿ ವಿಧಾನಸಭೆಯಲ್ಲಿ ಮುಂದುವರಿದ ಪ್ರತಿಭಟನೆ

Prasthutha|

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಕರೆ ನೀಡುತ್ತಿದ್ದಂತೆ, ಪರಸ್ಪರ ಭ್ರಷ್ಟಾಚಾರದ ಆರೋಪ ಹೊರಿಸಿ ಆಪ್  ಮತ್ತು ಬಿಜೆಪಿ ಎರಡೂ ಪಕ್ಷಗಳ ಶಾಸಕರು ದೆಹಲಿ ವಿಧಾನಸಭೆಯಲ್ಲಿ ನಡೆಸುತ್ತಿರುವ  ಪ್ರತಿಭಟನೆಯು ಮಂಗಳವಾರವೂ  ಮುಂದುವರಿದಿದೆ.

- Advertisement -

ಎಎಪಿ ಶಾಸಕರು ಮಹಾತ್ಮಾ ಗಾಂಧಿ ಅವರ ಸ್ಮಾರಕದ ಕೆಳಗೆ ಧರಣಿ ಸ್ಥಾಪಿಸಿದ್ದರೆ, ಬಿಜೆಪಿ ಶಾಸಕರು ದೆಹಲಿ ವಿಧಾನಸಭಾ ಮೈದಾನದೊಳಗೆ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಅವರ ಶಿಲ್ಪಗಳ ಬಳಿ ಧರಣಿ ಆರಂಭಿಸಿದರು.

2016ರಲ್ಲಿ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಕಪ್ಪುಹಣವನ್ನು ‘ವೈಟ್’ ಮಾಡಿದ ಆರೋಪದ ಮೇಲೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ರಾಜೀನಾಮೆಗೆ ಎಎಪಿ ಶಾಸಕರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ ದೆಹಲಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಸಕ್ಸೇನಾ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಪಕ್ಷದ ಶಾಸಕರು ಕೋರಿದ್ದಾರೆ.

- Advertisement -

ಎಲ್ ಜಿ  ವಿನಯ್ ಕುಮಾರ್ ಸಕ್ಸೇನಾ ಅವರ ರಾಜೀನಾಮೆಗೆ ಆಗ್ರಹಿಸಿ ಎಎಪಿ ನಾಯಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ದೆಹಲಿ ವಿಧಾನಸಭೆಯನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ಪ್ರತಿಭಟನೆಗಳು ಮುಂದುವರಿದಿದ್ದರಿಂದ ಅಧಿವೇಶನವನ್ನು ಸೋಮವಾರ ಮೂರು ಬಾರಿ ಮುಂದೂಡಲಾಗಿತ್ತು.



Join Whatsapp