ನವದೆಹಲಿ: 6 ತಿಂಗಳ ಬಳಿಕ ತಿಹಾರ್ ಜೈಲಿಂದ ಆಪ್ ಸಂಸದ ಸಂಜಯ್ ಸಿಂಗ್ ಹೊರ ಬಂದಿದ್ದಾರೆ. ನೆಚ್ಚಿನ ನಾಯಕನಿಗೆ ಪಕ್ಷದ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದ್ದಾರೆ.
ಸಂಜಯ್ ಸಿಂಗ್ ಬಿಡುಗಡೆಯನ್ನು ಎಎಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಸಿಎಂ ಕೇಜ್ರಿವಾಲ್ ಬಂಧನದ ಶೋಕದಲ್ಲಿದ್ದ ಆಪ್ ಕಾರ್ಯಕರ್ತರಿಗೆ ಸಂಜಯ್ ಸಿಂಗ್ ಬಿಡುಗಡೆ ಸಾಂತ್ವನ ನೀಡಿದಂತಾಗಿದೆ ಎನ್ನಲಾಗಿದೆ.
ದೆಹಲಿಯ ಅಬಕಾರಿ ನೀತಿ ಪರಿಷ್ಕರಣೆ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.