ದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್ ಗೆ, ವೈದ್ಯಕೀಯ ಕಾರಣಗಳಿಗಾಗಿ ಷರತ್ತುಗಳೊಂದಿಗೆ ಸುಪ್ರೀಂ ಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ಈ ಅವಧಿಯಲ್ಲಿ ಸತ್ಯೇಂದ್ರ ಜೈನ್ ಅನುಮತಿಯಿಲ್ಲದೆ ದೆಹಲಿಯನ್ನು ಬಿಡುವಂತಿಲ್ಲ ಮತ್ತು ಮಾಧ್ಯಮಗಳ ಮುಂದೆ ಯಾವುದೇ ರೀತಿಯಾದ ಹೇಳಿಕೆಗಳನ್ನ ನೀಡುವಂತಿಲ್ಲ ಎಂಬ ಪ್ರಮುಖ ಷರತ್ತುಗಳನ್ನ ಸುಪ್ರಿಂ ಕೋರ್ಟ್ ವಿಧಿಸಿದೆ.