ನವದೆಹಲಿ: ಜಹಾಂಗೀರ್ ಪುರಿಯಲ್ಲಿ ಅತಿಕ್ರಮಣ ಆಸ್ತಿಗಳ ತೆರವಿನ ಮೂಲಕ ದೇಶದಲ್ಲಿ ದಂಗೆ, ಗಲಭೆಗಳು ನಿಲ್ಲುತ್ತವೆ ಎಂದು ಪ್ರತಿಪಾದಿಸಿ ದೇಶದಲ್ಲಿ ಹಲವು ಆಸ್ತಿಗಳನ್ನು ನೆಲಸಮಗೊಳಿಸಿದ್ದಕ್ಕೆ ಪ್ರತಿಕ್ರಯಿಸಿದ ಆಪ್ ನಾಯಕಿ ಅತಿಶಿ ಮರ್ಲೇನಾ, ದೇಶದಲ್ಲಿ ದಂಗೆ ನೆಲ್ಲಬೇಕಾದರೆ ಮೊದಲು ಬಿಜೆಪಿಯ ಕೇಂದ್ರ ಕಚೇರಿಯನ್ನು ನೆಲಸಮಮಾಡಿ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪಕ್ಷವು ದೇಶದ ಪ್ರತಿ ಮೂಲೆಯಲ್ಲೂ ಗೂಂಡಾಗಿರಿ ಮಾಡುತ್ತಿದ್ದು,ಇದರ ಮುಖ್ಯ ರೂವಾರಿ ಗೃಹಸಚಿವ ಅಮಿತ್ ಶಾ ಆಗಿದ್ದಾರೆ. ಆದ್ದರಿಂದ ಮೊದಲು ಬುಲ್ಡೋಝರ್ ಹರಿಸಿ ನೆಲಸಮ ಮಾಡಬೇಕಾದ್ದು ಬಿಜೆಪಿಯ ಕೇಂದ್ರ ಕಚೇರಿಯನ್ನು ಮತ್ತು ಅಮಿತ್ ಶಾ ನಿವಾಸವನ್ನು ಎಂದು ಕಿಡಿಕಾರಿದ್ದಾರೆ. ಯಾವತ್ತು ಅಮಿತ್ ಶಾ ನಿವಾಸದ ಮೇಲೆ ಬುಲ್ಟೋಝರ್ ಹರಿದಾಡುತ್ತೋ ಅಂದು ದೇಶದಲ್ಲಿ ದಂಗೆ,ಗಲಭೆಗಳು ನಿಲ್ಲುತ್ತವೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಲೆಕ್ಕಿಸದೆ ಬಿಜೆಪಿ ಸರಕಾರ ಅತಿಕ್ರಮ ತೆರವು ಎಂಬ ನೆಪದಲ್ಲಿ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ದೇಶದ್ಯಾದಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ಇದು ಸಂವಿಧಾನದ ಹಗಲುಕೊಲೆ ಎಂದು ಹೇಳುತ್ತಿದ್ದಾರೆ