ಚಿನ್ನದ ಕಮೋಡ್, ಈಜುಕೊಳ: ಬಿಜೆಪಿ ಆರೋಪಕ್ಕೆ ಪ್ರಧಾನಿ ನಿವಾಸ ಪ್ರವೇಶಕ್ಕೆ ಯತ್ನಿಸಿದ ಎಎಪಿ

Prasthutha|

ನವದೆಹಲಿ: ದೆಹಲಿಯಲ್ಲಿ ಪ್ರಧಾನಿ ಮತ್ತು ಮುಖ್ಯಮಂತ್ರಿ ನಿವಾಸಗಳಲ್ಲಿ ಐಷಾರಾಮಿ ಸೌಲಭ್ಯಗಳ ಬಳಕೆ ಕುರಿತಾದ ಎಎಪಿ ಮತ್ತು ಬಿಜೆಪಿ ನಡುವಿನ ಆರೋಪ–ಪ್ರತ್ಯಾರೋಪ ತಾರಕಕ್ಕೇರಿದೆ.

- Advertisement -

ಮುಖ್ಯಮಂತ್ರಿ ಅತಿಶಿ ನಿವಾಸದಲ್ಲಿ ಚಿನ್ನದ ಕಮೋಡ್, ಈಜುಕೊಳಗಳು ಸೇರಿದಂತೆ ಐಶಾರಾಮಿ ಸೌಲಭ್ಯಗಳಿವೆ ಎಂದು ಬಿಜೆಪಿ ಆರೋಪ ಮಾಡಿತ್ತು. ಈ ಆರೋಪ ತಳ್ಳಿಹಾಕಿದ್ದ ಎಎಪಿ, ಹಾಗಿದ್ದರೆ ಪ್ರಧಾನಿ ನಿವಾಸದಲ್ಲಿ ಏನೆಲ್ಲ ಸೌಲಭ್ಯವಿದೆ ಎಂದು ಜನರಿಗೆ ತೋರಿಸುವಂತೆ ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಿತು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೆಹಲಿ ನಿವಾಸದೆದುರು ಪ್ರತಿಭಟನೆ ನಡೆಸಿದ ಎಎಪಿ ಮುಖಂಡರಾದ ಸೌರಭ್ ಭಾರದ್ವಾಜ್, ಸಂಜಯ್ ಸಿಂಗ್ ಮತ್ತು ಇತರ ನಾಯಕರು, ಬಳಿಕ ಪ್ರಧಾನಿ ನಿವಾಸಕ್ಕೆ ಪ್ರವೇಶಿಸಲು ಮುಂದಾಗಿದ್ದಾರೆ. ಈ ಸಂದರ್ಭ ಭದ್ರತಾ ಸಿಬ್ಬಂದಿ ಅವರಿಗೆ ತಡೆಯೊಡ್ಡಿದೆ. ದೆಹಲಿ ಮುಖ್ಯಮಂತ್ರಿ ಮನೆಗೆ ನುಗ್ಗಲು ಯತ್ನಿಸಿದ್ದ ಬಿಜೆಪಿ ಮುಖಂಡರ ಪ್ರತಿಭಟನೆಗೆ ಪ್ರತಿಯಾಗಿ ಎಎಪಿ, ಪ್ರಧಾನಿ ನಿವಾಸವನ್ನೂ ಜನರಿಗೆ ತೋರಿಸಿ ಎಂದು ಈ ಪ್ರತಿಭಟನೆ ಹಮ್ಮಿಕೊಂಡಿತ್ತು.



Join Whatsapp