ಅಮ್ ಆದ್ಮಿ ಪಕ್ಷದಿಂದ ನಾಲ್ಕನೇ ಪಟ್ಟಿ ಬಿಡುಗಡೆ

Prasthutha|

ಬೆಂಗಳೂರು: ಈಗಾಗಲೇ ಅಮ್ ಆದ್ಮಿ ಪಕ್ಷದಿಂದ ವಿಧಾನಸಭಾ ಚುನಾಮಣೆಗೆ ಮೂರು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು. 168 ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ. ಇಂದು ಆಮ್ ಆದ್ಮಿ ಪಕ್ಷದಿಂದ ನಾಲ್ಕನೇ ಪಟ್ಟಿಯನ್ನ ಕರ್ನಾಟಕ ರಾಜ್ಯ ಸಂಘಟನಾ ಸಹ ಪ್ರಮುಖ್ ದಾಮೋದರನ್ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಗಿದೆ.

- Advertisement -


ಆಮ್ ಆದ್ಮಿ ಪಕ್ಷದಿಂದ ನಾಲ್ಕನೇ ಪಟ್ಟಿಯನ್ನ ಆಮ್ ಆದ್ಮಿ ಪಾರ್ಟಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ 45 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಈ ವೇಳೆ ಕರ್ನಾಟಕ ರಾಜ್ಯ ಸಂಘಟನಾ ಸಹ ಪ್ರಮುಖ್ ದಾಮೋದರನ್, ಹಿರಿಯ ಸುಪ್ರಿಂಕೋರ್ಟ್ ವಕೀಲರು ಹಾಗೂ ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಮತ್ತು ಸಂವಹನ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ಆಪ್ ಕಾರ್ಯದರ್ಶಿ ದರ್ಶನ್ ಜೈನ್, ಅಮ್ ಆದ್ಮಿ ಪಕ್ಷದ ಮಾಧ್ಯಮ ವಕ್ತಾರೆ ಉಶಾ ಮೋಹನ್ ಅವರು ಭಾಗಿಯಾಗಿದ್ದರು.


ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಮತ್ತು ಸಂವಹನ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಅವರು ನಾಲ್ಕನೇ ಪಟ್ಟಿಯ ಅಭ್ಯರ್ಥಿಗಳ ವಿವರವನ್ನ ತಿಳಿಸಿದ್ದು, ಇಂದು 45 ಅಭ್ಯರ್ಥಿಗಳ ಹೆಸರನ್ನ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ. ಇದಲ್ಲದೇ 16 ಮಂದಿ ರೈತರು, 13 ಮಹಿಳೆಯರು, 18 ವಕೀಲರು, 10 ವೈಧ್ಯರು, 10 ಇಂಜಿನಿಯರ್ಸ್, 10 ಡಾಕರ್ರೆಟ್ ಅಭ್ಯರ್ಥಿಗಳು, 41 ಮಾಸ್ಟರ್ ಡಿಗ್ರಿ ಅಭ್ಯರ್ಥಿಗಳು, 82 ಪದವೀಧರ ಅಭ್ಯರ್ಥಿಗಳು ನಮ್ಮ ಒಟ್ಟಾರೆ ಪಟ್ಟಿಯಲ್ಲಿ ಇದ್ದಾರೆ. ಹಾಗೆ 5ನೇ ಪಟ್ಟಿ ಬಿಡುಗಡೆ ಬಳಿಕ ಎಲ್ಲವನ್ನ ಸೇರಿ ಸಂಪೂರ್ಣ ವಿಶ್ಲೇಷಣೆ ನೀಡುವುದಾಗಿ ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ.

- Advertisement -


ಬಳಿಕ ಮಾತನಾಡಿದ ಆಪ್ ಕಾರ್ಯದರ್ಶಿ ದರ್ಶನ್ ಜೈನ್ ಅವರು, ಈ ಮುಂಚೆ ಎರಡು ಕ್ಷೇತ್ರಗಳಲ್ಲಿ ಘೋಷಣೆ ಮಾಡಿದ್ದ ಅಭ್ಯರ್ಥಿಗಳನ್ನ ಬದಲಾವಣೆ ಮಾಡಲಾಗಿದೆ. ರಾಮನಗರದ ವಕೀಲ ನಂಜಪ್ಪ ಕಾಳೇಗೌಡ ಅವರ ಸ್ಥಾನಕ್ಕೆ ಬೈರೇಗೌಡರನ್ನ ಅಭ್ಯರ್ಥಿಯಾಗಿ ಘೋಷಿಸಿದ್ದು. ಮಡಿಕೇರಿಯಲ್ಲಿ ಬೋಪಣ್ಣ ಅವರನ್ನ ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

Join Whatsapp