ಸರ್ಕಾರದ ನೇಮಕಾತಿ ಲಿಸ್ಟ್‌ನಲ್ಲಿ ಹೆಸರು ಕೈ ಬಿಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ

Prasthutha|

ರಾಯಚೂರು : ಸರ್ಕಾರದ ನೇಮಕಾತಿ ಲಿಸ್ಟ್‌ನಲ್ಲಿ ಹೆಸರು ಕೈ ಬಿಟ್ಟಿದ್ದಕ್ಕೆ ಮನನೊಂದು ಶಿಕ್ಷಕನಾಗುವ ಕನಸು ಕಂಡಿದ್ದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಘಟನೆ ನಡೆದಿದ್ದು, ಮೃತ ಯುವಕನನ್ನು ಚಿಕ್ಕಬುದೂರಿನ 25 ವರ್ಷದ ಚನ್ನಬಸವ ಎಂದು ಗುರುತಿಸಲಾಗಿದೆ. ದೇವದುರ್ಗ ಪಟ್ಟಣದ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರೋ ಮರದ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ.

- Advertisement -

2022ರ ನೇಮಕಾತಿ ಪ್ರಕ್ರಿಯೆಯಲ್ಲಿ 6-8ನೇ ತರಗತಿ ಶಿಕ್ಷಕರ ಹುದ್ದೆಗೆ ಚನ್ನಬಸವ ಆಯ್ಕೆಯಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ನೇಮಕಾತಿ ಲಿಸ್ಟ್‌ನಿಂದ‌ ಈ ಯುವಕನ ಹೆಸರು ಕೈ ಬಿಡಲಾಗಿತ್ತು ಎನ್ನಲಾಗಿದೆ. ಇದಾದ ಬಳಿಕ ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಚನ್ನಬಸವ ಬರೆದಿದ್ದರು. ಆದರೆ ಆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.
ಬಳಿಕವೂ ಮೇಲೂ ಚನ್ನಬಸವ ಶಿಕ್ಷಕನಾಗಲು ಸಾಕಷ್ಟು ಕನಸು ಕಟ್ಟಿಕೊಂಡಿದ್ದರು. ದೇವದುರ್ಗ ಪಟ್ಟಣದಲ್ಲೇ ರೂಮ್ ಮಾಡಿದ್ದ ಚನ್ನಬಸವ ಮುಂದಿನ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಆದರೆ ಏನಾಯ್ತೋ ಗೊತ್ತಿಲ್ಲ. ಇಂದು ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡೆತ್‌ನೋಟ್‌ನಲ್ಲಿ ಯಾರೋ ಮಾಡಿದ ತಪ್ಪಿಗೆ ವ್ಯವಸ್ಥೆ ನನಗೆ ಶಿಕ್ಷೆ ನೀಡಿದೆ. ಆಡಳಿತ ವ್ಯವಸ್ಥೆಗೆ ನನ್ನ ಧಿಕ್ಕಾರವಿರಲಿ ಎಂದು ಬರೆದಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.



Join Whatsapp