ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವತಿ ಮದುವೆ ಮುನ್ನಾ ದಿನ ಕುಸಿದು ಬಿದ್ದು ಮೃತ್ಯು

Prasthutha|

ಮಲಪ್ಪುರಂ: ವೈವಾಹಿಕ ಜೀವನಕ್ಕೆ ಕಾಲಿಡಬೇಕಾಗಿದ್ದ ಯುವತಿಯೊಬ್ಬಳು ಮದುವೆಯ ಮುನ್ನಾ ದಿನವೇ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್’ಮನ್ನ ಎಂಬಲ್ಲಿ ನಡೆದಿದೆ.

- Advertisement -


ಪಥೈಕ್ಕರ ಸ್ಕೂಲ್ ಪಡಿ ಕಿಝಕ್ಕೆಥಿಲ್ ನಿವಾಸಿ ಮುಸ್ತಫಾ ಮತ್ತು ಝೀನತ್ ದಂಪತಿಯ ಪುತ್ರಿ ಫಾತಿಮಾ ಬತೂರ್ (19) ಮೃತಪಟ್ಟವರು.


ಜನವರಿ 14ರಂದು ಆಕೆಯ ಮದುವೆ ಮೂರ್ಕರ್ನಾಡ್’ಯ ಯುವಕನೊಂದಿಗೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಮನೆಯಲ್ಲಿ ಮದುರಂಗಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಫೋಟೋ ತೆಗೆಯುವಾಗ ಯುವತಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮ ಶೋಕತಪ್ತವಾಗಿದೆ.



Join Whatsapp