ಮಂಗಳೂರು | ಆಕಸ್ಮಿಕವಾಗಿ ಬಾವಿಗೆ ಬಿದ್ದ ಯುವತಿ ಮೃತ್ಯು

Prasthutha|

ಕಲ್ಲಡ್ಕ: ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿ ನೀರು ಸೇದುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಇಂದು ಬೆಳಿಗ್ಗೆ ಬಂಟ್ವಾಳ ಸಮೀಪದ ಕಲ್ಲಡ್ಕದಿಂದ ವರದಿಯಾಗಿದೆ.

- Advertisement -

ಮೃತರನ್ನು ಬಿಸಿರೋಡಿನ ತಲಪಾಡಿ ನಿವಾಸಿ, ಸದ್ಯ ಫರಂಗಿಪೇಟೆಯ ಅಮ್ಮೆಮಾರ್ ನಲ್ಲಿ ವಾಸವಿರುವ ಮುಹಮ್ಮದ್ ಎಂಬವರ ಮಗಳಾದ ಮುನೀಝಾ (20) ಎಂದು ಗುರುತಿಸಲಾಗಿದೆ.

ಸುಮಾರು ಎರಡು ತಿಂಗಳ ಹಿಂದೆ ಈಕೆಯ ಮದುವೆಯು ಕಲ್ಲಡ್ಕದ ಇಬ್ರಾಹಿಂ ತೌಸೀರ್ ಎಂಬಾತನೊಂದಿಗೆ ನೆರವೇರಿದ್ದು, ಇಂದು ಬೆಳಿಗ್ಗೆ ಕೊಡದಲ್ಲಿ ನೀರು ಸೇದುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದರು ಎಂದು ತಿಳಿದು ಬಂದಿದೆ.

- Advertisement -

ಬಾವಿ ಕಡೆಗೆ ತೆರಳಿ ಸುಮಾರು ಸಮಯ ಕಳೆದರೂ ಮುನೀಝಾ ಮನೆಗೆ ಬಾರದಿರುವುದನ್ನು ಗಮನಿಸಿದ ಮನೆಮಂದಿ ಬಾವಿ ಕಡೆಗೆ ಹೋಗಿ ಹುಡುಕಾಡಿದಾಗ ಕೊಡ ಬಾವಿ ನೀರಿನಲ್ಲಿ ತೇಲುತ್ತಿತ್ತು. ಬಳಿಕ ಮುನೀಝಾ ನೀರಿನಲ್ಲಿ ಮುಳುಗಿರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಸದ್ಯ ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.



Join Whatsapp