ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಪ್ರತೀ 2 ತಿಂಗಳಿಗೊಮ್ಮೆ ಹೊರತರುವ ಬೆಲ್ಕಿರಿ ದ್ವೈಮಾಸಿಕ ಸಂಚಿಕೆಯಲ್ಲಿ ಪ್ರಕಟಿಸಲು ಬ್ಯಾರಿ ಇತಿಹಾಸ, ಸಂಶೋಧನಾ ಲೇಖನಗಳು, ಪುಸ್ತಕ ಪರಿಚಯ, ಮರೆಯಲಾರದ ಬ್ಯಾರಿ ಮಹನೀಯರು, ಕಥೆ,ಕವನ ಚುಟುಕುಗಳನ್ನು ಆಹ್ವಾನಿಸಿದೆ.
ಟೈಪ್ ಮಾಡಿ ಕಳುಹಿಸುವುದಾದರೆ ನುಡಿ ಅಥವಾಬರಹ ಫಾಂಟ್‌ನಲ್ಲಿ ಕಳುಹಿಸಬೇಕು. ಹೆಸರು ಮತ್ತು ವಿಳಾಸವಿಲ್ಲದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಪ್ರಕಟಿತ ಲೇಖನಗಳ ಲೇಖಕ-ಲೇಖಕಿಯರಿಗೆ ಗೌರವ ಸಂಭಾವನೆ ಪಾವತಿಸಲಾಗುವುದು ಎಂದು ತಿಳಿಸಲಾಗಿದೆ.
ಆಸಕ್ತರು ತಮ್ಮ ಬರಹಗಳನ್ನು ಸಂಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್, ಮಿನಿ ವಿಧಾನಸೌಧದ ಬಳಿ, ಮಂಗಳೂರು 575001 ಅಥವಾ [email protected] ಅಥವಾ ಬೆಲ್ಕಿರಿ ದ್ವೈಮಾಸಿಕದ ಸಂಪಾದಕಿ ಹಫ್ಸಾ ಬಾನು ಬೆಂಗಳೂರು (ವಾಟ್ಸ್‌ಆ್ಯಪ್ ಸಂಖ್ಯೆ 7483946578) ಕಳುಹಿಸಿಕೊಡುವಂತೆ ಅಕಾಡಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.