ಅಶ್ಲೀಲ ಸೈಟ್ ನಲ್ಲಿ ಮಹಿಳೆಯ ಫೋಟೋ, ಫೋನ್ ನಂಬರ್; ವಾಟ್ಸ್ ಆಪ್ ಗ್ರೂಪ್ ನಿಂದ ಉಂಟಾದ ಅವಾಂತರ

Prasthutha|

ತಿರುವನಂತಪುರಂ: ಅಶ್ಲೀಲ ವೆಬ್ ಸೈಟ್ ನಲ್ಲಿ ಮಹಿಳೆಯೊಬ್ಬರ ಫೋನ್ ನಂಬರ್ ಮತ್ತು ಫೋಟೋವನ್ನು ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ ಘಟನೆ ತಿರುವನಂತಪುರಂ ಜಿಲ್ಲೆಯ ಕಾಟ್ಟಾಕ್ಕಡ ಎಂಬಲ್ಲಿ ನಡೆದಿದೆ.

- Advertisement -

ಈ ಬಗ್ಗೆ ಆರೋಪಿಯ ವಿರುದ್ಧ ಕಾಟ್ಟಾಕ್ಕಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಆರೋಪಿಯನ್ನು ಉಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದು, ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಸಿಐ ತನ್ನನ್ನು ಬಲವಂತಪಡಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.


ಪೊಲೀಸರಿಂದ ತನಗೆ ನ್ಯಾಯ ಸಿಗುವುದಿಲ್ಲ ಎಂದು ಖಚಿತವಾಗಿರುವ ಗೃಹಿಣಿ, ಗ್ರಾಮೀಣ ಎಸ್ಪಿಗೆ ದೂರು ನೀಡಿದ್ದಾರೆ.

- Advertisement -

ಸಂತ್ರಸ್ತ ಮಹಿಳೆಯ ಮೊಬೈಲ್ ಗೆ ವಿವಿಧ ಕಡೆಗಳಿಂದ ಅಶ್ಲೀಲ ಸಂದೇಶಗಳು ಬರಲು ಪ್ರಾರಂಭವಾದಾಗ ಆಕೆ ಮತ್ತು ವಿದೇಶದಲ್ಲಿರುವ ಆಕೆಯ ಪತಿ ಈ ಬಗ್ಗೆ ತನಿಖೆ ಪ್ರಾರಂಭಿಸಿದರು.


ತನ್ನ ಫೋಟೋ ಮತ್ತು ಫೋನ್ ನಂಬರ್ ಅಶ್ಲೀಲ ವೆಬ್ ಸೈಟ್ ಮತ್ತು ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಮಹಿಳೆ ಜನವರಿ 31 ರಂದು ಪೊಲೀಸರಿಗೆ ದೂರು ನೀಡಿದ್ದಳು. ಕುಟುಂಬವು ಸ್ವತಃ ವಿಚಾರಣೆ ನಡೆಸಿದಾಗ, ಆಕೆಯ 10 ನೇ ತರಗತಿಯ ವಾಟ್ಸಾಪ್ ಗ್ರೂಪ್ ನಿಂದ ಫೋಟೋ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.

ವೆಬ್ ಸೈಟಿನಲ್ಲಿರುವ ಚಿತ್ರವನ್ನು ಪರಿಶೀಲಿಸಿದಾಗ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದ ಗ್ರೂಪ್ ಫೋಟೋದಿಂದ ಕತ್ತರಿಸಲ್ಪಟ್ಟಿರುವುದನ್ನು ಪತ್ತೆಹಚ್ಚಿದ ಮಹಿಳೆ ಶಂಕಿತನ ಬಗೆಗಿನ ವಿವರಗಳನ್ನು ಪೊಲೀಸರಿಗೆ ನೀಡಿದ್ದಾರೆ.
ಈ ಮಧ್ಯೆ ಆರೋಪಿ ನೇರವಾಗಿ ಬಂದು ಮಹಿಳೆ ಮತ್ತು ಆಕೆಯ ಕುಟುಂಬದ ಮುಂದೆ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆ, ನಾನು ಕಾಟ್ಟಾಕ್ಕಡ ಸಿಐಗೆ ಮಾಹಿತಿ ನೀಡಿದಾಗ, ಆತ ಹಾಗೆ ಮಾಡಲಿಲ್ಲ. ಆದ್ದರಿಂದ ರಾಜಿ ಮಾಡಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ನನಗೆ 16 ವರ್ಷದ ಒಬ್ಬಳು ಮಗಳಿದ್ದು, ಇದು ಆಕೆಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.


ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ಗಳವರೆಗೆ ದಂಡ ವಿಧಿಸಲ್ಪಡುವ ಅಪರಾಧ ಮಾಡಿದ ಆರೋಪಿಗೆ ಪೊಲೀಸರು ಶಿಫಾರಸು ಮಾಡುತ್ತಿರುವುದು ಸಂಶಯಾಸ್ಪದವಾಗಿದೆ.

Join Whatsapp