ಬೆಳ್ಳಿಗೆಜ್ಜೆಗಾಗಿ ಮಹಿಳೆಯ ಪಾದ, ಕತ್ತು ಕತ್ತರಿಸಿದ ಕಿರಾತಕರು!

Prasthutha|

ರಾಜಸ್ಥಾನ: ಮಹಿಳೆಯ ಪಾದದಲ್ಲಿದ್ದ ಬೆಳ್ಳಿಗೆಜ್ಜೆಯ ಮೇಲೆ ಕಣ್ಣು ಹಾಕಿದ್ದ ಕಿರಾತಕರು ಆಕೆಯ ಪಾದವನ್ನು ಕತ್ತರಿಸಿ ಕಾಲುಗೆಜ್ಜೆಯನ್ನು ಕಿತ್ತುಕೊಂಡ ಬಳಿಕ ಆಕೆಯನ್ನು ಕತ್ತುಕೊಯ್ದು ಕೊಲೆಗೈದಿರುವ ಭಯಾನಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

- Advertisement -

ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಗಂಡನಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದ ಕಂಕುಭಾಯಿ ಎಂಬಾಕೆಯನ್ನು ಹಿಂಬಾಲಿಸಿದ ಕೊಲೆಗಡುಕರು ಹೊಲದ ಬದಿಯಲ್ಲಿಯೇ ಭೀಕರ ಕೃತ್ಯವೆಸಗಿ ಪರಾರಿಯಾಗಿದ್ದಾರೆ. ರಾಜಸ್ಥಾನದ ರಾಜ್’ಸಮಂಡ್ ಜಿಲ್ಲೆಯ ಚಾರ್’ಭುಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಂಜೆ ಮನೆಗೆ ಮರಳಿದ ಕಂಕುಭಾಯಿ ಪತಿ ಮಕ್ಕಳಲ್ಲಿ ತಾಯಿ ಎಲ್ಲಿ ಎಂದು ವಿಚಾರಿಸಿದಾಗ, ಹೊಲಕ್ಕೆ ಊಟ ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ. ಬಳಿಕ ಹುಡುಕಾಡಿದಾಗ ಕಂಕುಬಾಯಿಯ ಮೃತದೇಹ ಪಾದ ಹಾಗೂ ಕತ್ತು ಕತ್ತಿರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Join Whatsapp