►185 ಜನರ ಪ್ರಾಣ ಕಾಪಾಡಿದ ಪೈಲಟ್… !
ಪಾಟ್ನಾ: ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿ 185 ಪ್ರಯಾಣಿಕರ ಜೀವ ಉಳಿಸಿದ ಪೈಲಟ್ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವಿಮಾನದಲ್ಲಿದ್ದ 185 ಜನರ ಪ್ರಾಣ ಕಾಪಾಡಿದ ಪೈಲಟ್ ಮೋನಿಕಾ ಖನ್ನಾ ಮತ್ತು ಸಹ ಪೈಲಟ್ ಬಲ್ಪ್ರೀತ್ ಸಿಂಗ್ ಭಾಟಿಯಾ ಅವರನ್ನು ಸ್ಪೈಸ್ಜೆಟ್ ಶ್ಲಾಘಿಸಿದೆ.
ಪಾಟ್ನಾದಿಂದ ದೆಹಲಿಗೆ ಹಾರುತ್ತಿದ್ದ ಸ್ಪೈಸ್ಜೆಟ್ ವಿಮಾನನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಪೈಲೆಟ್ ಗಳು ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದ್ದರು.
ವಿಮಾನದ ಮುಖ್ಯ ಪೈಲಟ್ ಆಗಿದ್ದ ಮೋನಿಕಾ ಖನ್ನಾರ ಬುದ್ಧಿವಂತಿಕೆಗೆ ಕ್ಯಾಪ್ಟನ್ ಗುರುಚರಣ್ ಅರೋರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಪಾಟ್ನಾ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿ ಅನಾಹುತ ತಪ್ಪಿಸಿದ್ದಾರೆ. ಅವರು ನುರಿತ ಪೈಲಟ್ ಆದ ಕಾರಣ ಈ ರೀತಿಯ ನಿರ್ಧಾರಕ್ಕೆ ತಕ್ಷಣವೇ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಪಾಟ್ನಾದಿಂದ ದೆಹಲಿಗೆ ತೆರಳುವ ಸ್ಪೈಸ್ ಜೆಟ್ 737 ವಿಮಾಣ ಬೆಳಗ್ಗೆ ಪಾಟ್ನಾದಿಂದ ಟೇಕ್ ಆಫ್ ಆಗಿತ್ತು. ನಂತರ ಕೆಲವೇ ನಿಮಿಷಗಳಲ್ಲಿ ವಿಮಾನದ ಇಂಜಿನ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಪೈಲಟ್ ಗಮನಕ್ಕೆ ಬಂದಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಮೋನಿಕಾ ಖನ್ನಾ ಮರಳಿ ಪಾಟ್ನಾ ಏರ್ ಪೋರ್ಟ್ ಗೆ ಆಗಮಿಸಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಿದ್ದರು.