ಕಳ್ಳತನಕ್ಕೆ ಬಂದು ಮೂರ್ತಿಗೆ ನಮಿಸಿ ಬರಿಗೈಲಿ ಹೊರಹೋದ ಕಳ್ಳ: ಸಿಸಿಟಿವಿಯಲ್ಲಿ ಸೆರೆ

Prasthutha|

ಬೆಂಗಳೂರು: ದೇವಸ್ಥಾನದಲ್ಲಿರುವ ಮೂರ್ತಿಯ ಮೈಮೇಲಿನ ಚಿನ್ನಾಭರಣವನ್ನು ಕದಿಯಲು ಬಂದಿದ್ದ ಕಳ್ಳನೋರ್ವ ದೇವರಿಗೆ ನಮಿಸಿ ಬರಿಗೈಯಲ್ಲಿ ಹೊರ ಹೋಗಿರುವ ಘಟನೆ ತಾವರೆಕೆರೆಯ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ  ನಡೆದಿದೆ.

- Advertisement -

ಸುಬ್ರಹ್ಮಣ್ಯಸ್ವಾಮಿ  ದೇವಸ್ಥಾನದ ಬೀಗ ಹೊಡೆದು ಒಳಗೆ ನುಗ್ಗಿದ  ಕಳ್ಳ ಅರೆಬೆತ್ತಲಾಗಿ ಇಡೀ ದೇವಸ್ಥಾನದ ತುಂಬೆಲ್ಲಾ ಅಡ್ಡಾಡಿದ್ದಾನೆ.

ನಂತರ ಗರ್ಭಗುಡಿಯ ಬಾಗಿಲು ತೆರೆದು ಒಳಗೆ ಹೋಗಿದ್ದಾನೆ.  ಕೆಲ ಕಾಲ ಗರ್ಭಗುಡಿಯಲ್ಲೇ ಇದ್ದು ಮೂರ್ತಿಗೆ ನಮಸ್ಕರಿಸಿ ಅಲ್ಲಿದ್ದ ಚಿನ್ನಭರಣ, ನಗದು ತೆಗೆದುಕೊಳ್ಳದೆ ನೇರವಾಗಿ ಹೊರಬಂದಿದ್ದಾನೆ.

- Advertisement -

ದೇವಸ್ಥಾನದಲ್ಲಿ ಕಳ್ಳನ ಓಡಾಟ, ಗರ್ಭಗುಡಿಗೆ ಪ್ರವೇಶಿಸಿದ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ನೋಡಿದ ದೇವಸ್ಥಾನದ ಆಡಳಿತ ಮಂಡಳಿ ತಾವರೆಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ



Join Whatsapp