ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಜನವರಿ 17 ರಂದು ರಾಜ್ಯವ್ಯಾಪಿ ಪ್ರತಿಭಟನೆ: ಸಿಪಿಐಎಂ ರಾಜ್ಯ ಕಾರ್ಯದರ್ಶಿ ಬಸವರಾಜ

Prasthutha|

ಗಂಗಾವತಿ: ಇಲ್ಲಿನ ಜ್ಯೋತಿನಗರದಲ್ಲಿ ನಡೆದ ಸಿಪಿಐ(ಎಂ) ಕರ್ನಾಟಕ ರಾಜ್ಯ 23ನೇ ಸಮ್ಮೇಳನವು ಜನವರಿ 2 ರಿಂದ 4ರವರೆಗೆ ಯಶಸ್ವಿಯಾಗಿ ನಡೆದಿದೆ. ಈ ರಾಜ್ಯ ಸಮ್ಮೇಳನವು ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಿದೆ.

- Advertisement -

ರಾಜ್ಯ ಕಾರ್ಯದರ್ಶಿಯಾಗಿ ಯು. ಬಸವರಾಜ ಆಯ್ಕೆಯಾಗಿದ್ದು, 12 ಮಂದಿ ನೂತನ ಕಾರ್ಯದರ್ಶಿ ಮಂಡಳಿ ಸದಸ್ಯರನ್ನು ಸಮ್ಮೇಳನವು ಆಯ್ಕೆ ಮಾಡಿದೆ. ಎಸ್. ವರಲಕ್ಷ್ಮಿ, ಕೆ.ಎನ್.ಉಮೇಶ್, ಮೀನಾಕ್ಷಿ ಸುಂದರಂ, ಕೆ. ಪ್ರಕಾಶ್, ಸೈಯದ್ ಮುಜೀಬ್, ಗೋಪಾಲಕೃಷ್ಣ ಹರಳಹಳ್ಳಿ, ಜಿ.ಸಿ.ಬಯ್ಯಾರೆಡ್ಡಿ, ಕೆ.ಯಾದವಶೆಟ್ಟಿ, ಎಂ.ಪಿ.ಮುನಿವೆಂಕಟಪ್ಪ, ಜಿ.ನಾಗರಾಜ್, ಕೆ.ನೀಲಾ ಅವರನ್ನು ಆಯ್ಕೆ ಮಾಡಲಾಗಿದೆ.

ನೂತನ ರಾಜ್ಯ ಸಮಿತಿ ಸದಸ್ಯರು: ವಸಂತಾಚಾರಿ, ಮುನೀರ್ ಕಾಟಿಪಳ್ಳ, ಲಕ್ಷ್ಮೀ ನಾರಾಯಣ, ನಿರುಪಾದಿ ಬೆಣಕಲ್, ಯಮುನಾ ಗಾಂವ್ಕರ್ , ಬಾಲಕೃಷ್ಣ ಶೆಟ್ಟಿ ಉಡುಪಿ , ಗಾಂದಿನಗರ ನಾರಾಯಣಸ್ವಾಮಿ, ಕೆ.ಜಿ.ವಿರೇಶ್, ಬಿ.ಎನ್.ಮಂಜುನಾಥ್, ಎನ್.ಪ್ರತಾಪ್ ಸಿಂಹ, ವಸಂತರಾಜ್ ಎನ್ ಕೆ, ಎಚ್.ಎಸ್.ಸುನಂದಾ, ಗೌರಮ್ಮ, ಕೆ.ಎಸ್ ವಿಮಲಾ, ಕೆ.ಮಹಾಂತೇಶ್, ಆರ್. ಎಸ್. ಬಸವರಾಜ, ಬಿ.ಮಾಳಮ್ಮ, ದೇವಿ, ಚಂದ್ರಪ್ಪ ಹೊಸ್ಕೇರಾ, ಎಸ್.ವೈ ಗುರುಶಾಂತ್, ಎಂ. ಪುಟ್ಟಮಾದು, ಗುರುರಾಜ ದೇಸಾಯಿ ಆಯ್ಕೆಯಾಗಿದ್ದಾರೆ.

- Advertisement -

ಮತಾಂತರ ನಿಷೇಧ ಕಾಯ್ದೆ ವಾಪಸ್ಸಾಗಲಿ: ಧಾರ್ಮಿಕ ಸ್ವಾತಂತ್ರ್ಯ ಕಸಿಯುವ ಮತಾಂತರ ನಿಷೇಧ ಕಾಯ್ದೆ ವಾಪಸ್ಸಾತಿಗಾಗಿ ಆಗ್ರಹಿಸಿ ಜನವರಿ 17 ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಯಲಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದರು.

ಗಂಗಾವತಿಯ ಪಕ್ಷದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ರಾಜಕೀಯ ಸನ್ನಿವೇಶಗಳನ್ನು ಚರ್ಚಿಸುವುದೊಂದಿಗೆ ಹಲವು ಜನಪರ ಪ್ರಶ್ನೆಗಳ ಪರಿಹಾರಕ್ಕಾಗಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಮೂರು ದಿನಗಳು ನಡೆದ ಸಮ್ಮೇಳನದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು, ಜನತೆಯ ಹಲವು ಸಂಕಷ್ಟಗಳು ಮತ್ತು ಸಮಸ್ಯೆಗಳು ಗುರುತಿಸಿ ಪಕ್ಷವು ನಡೆಸಿದ ಹೋರಾಟ-ಚಳುವಳಿಗಳು ಮತ್ತು ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಆದಂತಹ ಬೆಳವಣಿಗೆಗಳನ್ನು ಅದರ ನಡುವೆಯೂ ಜನಚಳುವಳಿ ಮಾಡಲಾಗಿದೆ.
ಮುಂಬರುವ ಮೂರು ವರ್ಷಗಳಲ್ಲಿ ಜನತೆ ಪ್ರಶ್ನೆಗಳನ್ನು ಪರಿಹಾರಕ್ಕಾಗಿ ಬಲಿಷ್ಠವಾದ ಚಳುವಳಿಯನ್ನು ಸಂಘಟಿಸುವ ಬಗ್ಗೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ. ನಾಗರಾಜ, ರಾಜ್ಯ ಸಮಿತಿ ಸದಸ್ಯ ಚಂದ್ರಪ್ಪ ಹೊಸಕೇರಾ, ನಿರುಪಾದಿ ಬೆಣಕಲ್ ಉಪಸ್ಥಿತರಿದ್ದರು.

Join Whatsapp