ನವದೆಹಲಿ । ಪುಶ್ ಬ್ಯಾಕ್ ಸಂದರ್ಭ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಿಮಾನ; ತನಿಖೆಗೆ ಆದೇಶ

Prasthutha|

ನವದೆಹಲಿ: ಜಮ್ಮುವಿಗೆ ತೆರಳಬೇಕಾಗಿದ್ದ ಸ್ಪೈಸ್ ಜೆಟ್ ವಿಮಾನ ಪುಶ್ ಬ್ಯಾಕ್ ಸಂದರ್ಭದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

- Advertisement -

ಸ್ಪೈಸ್ ಜೆಟ್ ಕಂಪೆನಿಗೆ ಸೇರಿದ ಎಸ್.ಜಿ – 160 ವಿಮಾನ ದೆಹಲಿಯಿಂದ ಜಮ್ಮುವಿಗೆ ತೆರಳಬೇಕಾಗಿತ್ತು. ಪ್ಯಾಸೆಂಜರ್ ಟರ್ಮಿನಲ್ ಕಡೆಯಿಂದ ವಿಮಾನ ರನ್‌ವೇ ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ. ಈ ನಿಟ್ಟಿನಲ್ಲಿ ಕೂಡಲೇ ಪ್ರಯಾಣಿಕರಿಗೆ ಬೇರೊಂದು ವಿಮಾನದ ವ್ಯವಸ್ಥೆಗೊಳಿಸಲಾಗಿದೆ.

ವಿಮಾನದ ಪುಶ್‌ಬ್ಯಾಕ್ ವೇಳೆ ಬಲಬದಿಯ ರೆಕ್ಕೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಿಮಾನ ಮತ್ತು ಕಂಬ ಎರಡಕ್ಕೂ ಭಾಗಶಃ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp