ಬೆಂಗಳೂರು: ಒಂಟಿತನ ಹೋಗಲಾಡಿಸಲು ವೀಕೆಂಡ್‌ನಲ್ಲಿ ಆಟೋ ಓಡಿಸುವ ಸಾಫ್ಟ್‌ ವೇರ್ ಇಂಜಿನಿಯರ್‌

Prasthutha|

ಬೆಂಗಳೂರು: ಸಾಫ್ಟ್‌ ವೇರ್ ಇಂಜಿನಿಯರ್‌ ಒಬ್ಬರು ವೀಕೆಂಡ್‌ನಲ್ಲಿ ಆಟೋ ಓಡಿಸುವ ಮೂಲಕ ತನ್ನ ಒಂಟಿತನದ ಭಾವನೆಯನ್ನು ಹೋಗಲಾಡಿಸಲು ವಿಭಿನ್ನ ದಾರಿಯನ್ನು ಕಂಡುಕೊಂಡಿದ್ದಾರೆ.

- Advertisement -

ವಾರಪೂರ್ತಿ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಲಕ್ಷಾಂತರ ಸಂಬಳ ಸಿಗುವ ಕೆಲಸ ಮಾಡುವ ಈ ಟೆಕ್ಕಿ, ವಾರಾಂತ್ಯದಲ್ಲಿ ನಮ್ಮ ಯಾತ್ರಿ ಆಟೋ ಓಡಿಸುವ ಕೆಲಸ ಮಾಡುತ್ತಿದ್ದಾರೆ.

ವ್ಯಕ್ತಿಯೊಬ್ಬರು ಕೋರಮಂಗಲದ ಹತ್ತಿರ ನಮ್ಮ ಯಾತ್ರಿ ಆಟೋ ಬುಕ್‌ ಮಾಡುತ್ತಾರೆ. ಆಟೋದಲ್ಲಿ ಕುಳಿತ ಬಳಿಕ ಅವರು ಡ್ರೈವರ್‌ನ ಬಟ್ಟೆಯಲ್ಲಿ ಮೈಕ್ರೋಸಾಫ್ಟ್‌ ಲೋಗೋ ಇರುವುದನ್ನು ಗಮನಿಸಿ ನೀವು ಮೈಕ್ರೋಸಾಫ್ಟ್‌ ಉದ್ಯೋಗಿಯೇ ಎಂದು ಕೇಳುತ್ತಾರೆ. ಹೀಗೆ ಮಾತುಕತೆ ಆರಂಭವಾಗಿ ಆ ಟೆಕ್ಕಿ, ಹೌದು ನಾವು ಸಾಫ್ಟ್‌ವೇರ್‌ ಇಂಜಿನಿಯರ್.‌ ಹಣಕ್ಕಾಗಿ ನಾನು ಈ ಆಟೋವನ್ನು ಓಡಿಸುತ್ತಿಲ್ಲ. ನನಗೆ ವಿಪರೀತವಾಗಿ ಒಂಟಿತನ ಎಂಬುದು ಕಾಡುತ್ತಿದೆ. ಈ ಒಂಟಿತನ ಮತ್ತು ಒತ್ತಡದಿಂದ ಮುಕ್ತಿ ಪಡೆಯಲು ನಾನು ಆಟೋ ಓಡಿಸುತ್ತೇನೆ ಎಂದು ಹೇಳಿದ್ದಾರೆ.

- Advertisement -

ಇವರ ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.



Join Whatsapp