ಹಿಂಸೆ ಹೆಚ್ಚುತ್ತಿರುವ ಸಮಾಜವು ಹೆಚ್ಚು ದಿನ ಉಳಿಯುವುದಿಲ್ಲ: ಮೋಹನ್ ಭಾಗವತ್

Prasthutha|

ಮುಂಬೈ: ಹಿಂಸೆ ಹೆಚ್ಚುತ್ತಿರುವ ಸಮಾಜವು ಹೆಚ್ಚು ದಿನ ಉಳಿಯುವುದಿಲ್ಲ. ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಆರ್‌ ಎಸ್‍ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

- Advertisement -

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದೇಶದ ಹಲವಾರು ಭಾಗಗಳಲ್ಲಿ ಗುಂಪುಗಳ ನಡುವೆ ಘರ್ಷಣೆಗಳು ನಡೆಯುತ್ತಿವೆ. ಈ ರೀತಿಯ ಹಿಂಸಾಚಾರದಿಂದಾಗಿ ಯಾರಿಗೂ ಪ್ರಯೋಜನವಿಲ್ಲ. ಇದರ ಬದಲು ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸುವ ಮತ್ತು ಮಾನವೀಯತೆಯನ್ನು ಕಾಪಾಡುವ ಅಗತ್ಯತೆ ಇದೆ ಎಂದರು.

ಹಿಂಸೆ ಹೆಚ್ಚುತ್ತಿರುವ ಸಮಾಜವು ತನ್ನ ಕೊನೆಯ ದಿನಗಳನ್ನು ಎಣಿಸುತ್ತದೆ. ನಾವು ಎಂದಿಗೂ ಅಹಿಂಸಾತ್ಮಕ ಮತ್ತು ಶಾಂತಿ ಪ್ರಿಯರಾಗಬೇಕು. ಇದಕ್ಕಾಗಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಶಾಂತಿ ಕಾಪಾಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.



Join Whatsapp