ಪುಸ್ತಕದೊಳಗೆ ಅವಿತುಕೂತ ಹಾವು; ಗೃಹಿಣಿ ಕಂಗಾಲು

Prasthutha|

ಶಿವಮೊಗ್ಗ: ಸಾಗರ ತಾಲೂಕು ತಲವಾಟದ ಮನೆಯೊಂದರಲ್ಲಿ ಟೇಬಲಿನ ಮೇಲಿದ್ದ ಪುಸ್ತಕದ ಒಳಗೆ ಹಾವು ಅವಿತುಕೊಂಡಿದ್ದು ಯಾವುದೇ ಅಪಾಯಗಳು ಉಂಟಾಗಲಿಲ್ಲ ಎಂದು ತಿಳಿದು ಬಂದಿದೆ.

- Advertisement -

ಟೇಬಲ್​ ಸ್ವಚ್ಛ ಮಾಡಲು ಬಂದ ಮನೆಯ ಗೃಹಿಣಿ ವಿದ್ಯಾ, ಅಲುಗಾಡುತ್ತಿದ್ದ ಪುಸ್ತಕ ಕಂಡು ಅನುಮಾನಗೊಂಡು ನೋಡಿದಾಗ ಕಪ್ಪು ಬಣ್ಣದ ಅರಿಶಿಣ ಪಟ್ಟೆಯುಳ್ಳ ಕಟ್ಟಿಗೆ ಹಾವು ಟೇಬಲ್​ ಮೇಲೆ ಇಟ್ಟಿದ್ದ ಪುಸ್ತಕದೊಳಗೆ ಹಾವು ಅವಿತುಕೂತಿದ್ದನ್ನು ಕಂಡು ಕಂಗಾಲಾಗಿದ್ದಾರೆ.

ಮಳೆಗಾಲ ಬಂದರೆ ಹಾವುಗಳಂತಹ ಸರೀಸೃಪಗಳು ಬೆಚ್ಚಗಿನ ಪ್ರದೇಶವನ್ನು ಹುಡುಕಿ ಬರುವುದು ಸಹಜ. ಆದ್ದರಿಂದ ಧರಿಸುವ ಮೊದಲು ಶೂ,ಚಪ್ಪಲಿಗಳನ್ನು ತುಂಬಾ ಜಾಗರೂಕತೆಯಿಂದ ಗಮನಿಸಬೇಕಾಗಿದೆ.



Join Whatsapp