ಬೆಂಗಳೂರು: ಜಯನಗರ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಶಾಸಕ ರಾಮಮೂರ್ತಿ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.
ಜಯನಗರ ಶಾಂಪಿಗ್ ಕಾಂಪ್ಲೇಕ್ಸ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹಾಗೂ ಮಾಜಿ ಶಾಸಕರ ವಿರುದ್ಧ ಶಾಸಕರು ಆರೋಪ ಮಾಡಿದ್ದಾರೆ.
ಜಯನಗರ ನೂತನ ಶಾಂಪಿಗ್ ಕಾಂಪ್ಲೆಕ್ಸ್ ನಲ್ಲಿ 362 ಮಳಿಗೆ ನಿರ್ಮಾಣ ಮಾಡಲಾಗಿದೆ. 362 ಮಳಿಗೆಗಳಲ್ಲಿ 30 ರಿಂದ 35 ಮಳಿಗೆಗಳನ್ನ ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿದೆ. ಒಂದು ಮಳಿಗೆಗೆ ಕನಿಷ್ಠ 40 ರಿಂದ 50 ಲಕ್ಷ ಹಣ ಸೂಲಿಗೆ ಮಾಡಲಾಗಿದ್ದು, ಒಟ್ಟಾರೆ 15 ರಿಂದ 20 ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಶಾಸಕ ರಾಮಮೂರ್ತಿ ಆರೋಪ ಮಾಡಿದ್ದಾರೆ.