ಉ.ಪ್ರ: ಮೆನುವಿನಲ್ಲಿ ಬೀಫ್ ಬರ್ಗರ್ ಮುದ್ರಿಸಿದ್ದ ರೆಸ್ಟೋರೆಂಟ್ ಮಾಲಕನನ್ನು ಬಂಧಿಸಿದ ಪೊಲೀಸರು

Prasthutha|

ಬರೇಲಿ: ಮೆನುವಿನಲ್ಲಿ ಬೀಫ್ ಬರ್ಗರ್ ಇದ್ದ ಕಾರಣಕ್ಕಾಗಿ ರೆಸ್ಟೋರೆಂಟ್ ಮಾಲಕನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಬರೇಲಿ ಎಂಬಲ್ಲಿ ನಡೆದಿದೆ.

- Advertisement -

ರೆಸ್ಟೋರೆಂಟ್ ಮಾಲೀಕರ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಫ್ಘಾನ್ ಕೆಫೆ ಎಂಬ ರೆಸ್ಟೋರೆಂಟ್ ಮೆನುವಿನಲ್ಲಿ ʼಬೀಫ್ ಬರ್ಗರ್ʼ ಇದೆ. ಬೀಫ್ ಮಾರಾಟ ಮಾಡಿದ ರೆಸ್ಟೋರೆಂಟ್ ಮಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು.

- Advertisement -

ರೆಸ್ಟೋರೆಂಟ್ ಮಾಲಕನನ್ನು ಬಂಧಿಸಲಾಗಿದೆ. ಬೀಫ್ ಬರ್ಗರ್ ಎಂದು ಮೆನುವಿನಲ್ಲಿ ಪ್ರಮಾದವಶಾತ್ ಮುದ್ರಿಸಲಾಗಿದೆ ಎಂದು ರೆಸ್ಟೋರೆಂಟ್ ಮಾಲಕ ಹೇಳುತ್ತಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಅಖಿಲೇಶ್ ಭಡಾರಿಯಾ ಹೇಳಿದ್ದಾರೆ.

Join Whatsapp