ಉ.ಪ್ರ: ಕನ್ವರಿಯಾ ಯಾತ್ರಿಗಳಿಗೆ ಪರಿಹಾರ ಶಿಬಿರಗಳನ್ನು ನಿಲ್ಲಿಸಿದ ಮುಸ್ಲಿಂ ಸಂಸ್ಥೆಗಳು

Prasthutha|

ಮುಝಫ್ಫರ್‌ನಗರ: ನಾಮಫಲಕ ಪ್ರದರ್ಶನ ವಿವಾದದ ಸ್ವರೂಪಕ್ಕೆ ಪಡೆದ ಹಿನ್ನೆಲೆಯಲ್ಲಿ ಕನ್ವರಿಯಾ ಯಾತ್ರಿಗಳಿಗೆ ಏರ್ಪಡಿಸುತ್ತಿದ್ದ ಪರಿಹಾರ ಶಿಬಿರಗಳ ನಿರ್ಮಾಣದಿಂದ ಹಲವಾರು ಮುಸ್ಲಿಂ ಸಂಸ್ಥೆಗಳು ಹಿಂದೆ ಸರಿದಿವೆ ಎಂದು ವರದಿಯಾಗಿದೆ.

- Advertisement -

ಕನ್ವರ್ ಯಾತ್ರೆಯ ಮಾರ್ಗದಲ್ಲಿನ ಮಳಿಗೆಗಳ ಮಾಲಕರು ತಮ್ಮ ನಾಮಫಲಕಗಳನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಆದೇಶವು ವಿವಾದದ ಸ್ವರೂಪ ಪಡೆದುಕೊಂಡಿದೆ.

ಅತ್ಯಂತ ಬೃಹತ್ ಪರಿಹಾರ ಶಿಬಿರವಾಗಿದ್ದ ಪೈಘಮ್-ಇ-ಇನ್ಸಾಯಿತ್ ಸಂಘಟನೆಯ ಅಧ್ಯಕ್ಷ ಆಸಿಫ್ ರಹಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪರಿಹಾರ ಶಿಬಿರಗಳನ್ನು ಭಾರವಾದ ಹೃದಯದಿಂದ ರದ್ದುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ. ನಾವೇನು ಮಾಡಲು ಸಾಧ್ಯ? ನಮಗೆ ಕೋಮು ಸೌಹಾರ್ದತೆ ಬೇಕಿದೆ. ಆದರೆ, ಅವರಿಗೆ (ಸ್ಥಳೀಯ ಸಂಸ್ಥೆಗಳು) ರಾಜಕಾರಣ ಮಾಡುವುದು ಮಾತ್ರ ಬೇಕಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

ಕನ್ವರಿಯಾಗಳಿಗಾಗಿ ಸೇವೆಗಳನ್ನು ನಿರ್ವಹಿಸುತ್ತಾ ಬರುತ್ತಿರುವ ಸೆಕ್ಯುಲರ್ ಫ್ರಂಟ್ ಎಂಬ ಸಂಸ್ಥೆಯ ಸಂಸ್ಥಾಪಕ ಗೋಹರ್ ಸಿದ್ದಿಕಿ, ಕೇವಲ ಮುಸ್ಲಿಮರು ಮಾತ್ರವಲ್ಲ, ಹಿಂದೂಗಳೂ ಸೆಕ್ಯುಲರ್ ಫ್ರಂಟ್ ಸದಸ್ಯರಾಗಿದ್ದಾರೆ. ಕಳೆದ 16 ವರ್ಷಗಳಿಂದ ಕನ್ವರಿಯಾಗಳಿಗೆ ಪುಷ್ಪನಮನ ಹಾಗೂ ಹಣ್ಣುಗಳನ್ನು ನೀಡಿ ನಾವು ಸ್ವಾಗತಿಸುತ್ತಾ ಬರುತ್ತಿದ್ದೇವೆ. ಆದರೆ, ಈ ವರ್ಷ ಸಾಕಷ್ಟು ಅನಗತ್ಯ ವಿವಾದ ಸೃಷ್ಟಿಸಲಾಗಿದೆ. ಕನ್ವರಿಯಾಗಳಿಗೆ ಸೇವೆ ಸಲ್ಲಿಸಲು ಈ ಬಾರಿ ಜಿಲ್ಲಾಡಳಿತದ ಅನುಮತಿ ಪಡೆಯಬೇಕಿದೆ. ಇದು ನಿಜಕ್ಕೂ ವಿಚಿತ್ರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



Join Whatsapp